ನಡುಗುತ್ತಲೇ ಟ್ರೋಲ್ ಮಾಡಿದವರಿಗೆ ವಿಶಾಲ್ ಟಾಂಗ್

Public TV
1 Min Read

ಮಿಳಿನ ನಟ ವಿಶಾಲ್ (Vishal) ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕೈ ನಡುಗುತ್ತಿರುವ ಸ್ಥಿತಿ ಕಂಡು  ಫ್ಯಾನ್ಸ್‌ ಆತಂಕ ವ್ಯಕ್ತಪಡಿಸಿದ್ದರು. ಅನಾರೋಗ್ಯದ ವಿಡಿಯೋ ನೋಡಿ ಅನೇಕರು ಕಾಲೆಳೆದಿದ್ದರು. ಈಗ ವಿಶಾಲ್ ಗುಣಮುಖರಾಗಿದ್ದಾರೆ. ಹಾಗಾಗಿ ಸಿನಿಮಾದ ಸಮಾರಂಭವೊಂದರಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ನಾನು ಕನ್ನಡ ಮೀಡಿಯಂ ಸರ್ಕಾರಿ ಶಾಲೆಯಲ್ಲೇ ಓದಿದ್ದು: ರಜನಿಕಾಂತ್

‘ಮದಗಜರಾಜ’ (Madha Gaja Raja) ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾದ ವಿಶಾಲ್ ಅವರು ಮೈಕ್ ಅನ್ನು ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಶುರುವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅಯ್ಯೋ ಏನಿದು ನಡುಗುತ್ತಿರುವುದು ನಿಲ್ಲುತ್ತಲೇ ಇಲ್ಲವಲ್ಲ ಎಂದರು. ಮತ್ತೆ ಈ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಲ್ಲ ಅಲ್ವಾ? ಎಂದು ತಮಾಷೆಯಾಗಿ ಮಾತನಾಡಿದರು. ಈ ಮೂಲಕ ಟ್ರೋಲ್ ಮಾಡಿದವರಿಗೆ ನಟ ಟಾಂಗ್ ಕೊಟ್ಟಿದ್ದಾರೆ.

ಇನ್ನೂ 12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಇದೀಗ ಜ.12ಕ್ಕೆ ರಿಲೀಸ್ ಆಗಿತ್ತು. ಇದರ ಪ್ರಿ- ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ವಿಶಾಲ್ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡಗುತ್ತಿತ್ತು. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿರಲಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗುತ್ತಿತ್ತು. ಅವರ ಕಣ್ಣುಗಳಿಂದ ಕಣ್ಣೀರು ಉಮ್ಮಳಿಸಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹಾಗಾಗಿ ನಟ ಇದೀಗ ಟ್ರೋಲಿಗೆ ತಿರುಗೇಟು ನೀಡಿದ್ದಾರೆ.

ಇನ್ನೂ ಅಭಿಮಾನಿಗಳು ಆತಂಕಕ್ಕೆ ಒಳಗಾಗದೇ ಇರಲಿ ಎಂದು ವಿಶಾಲ್ ಕೂಡ ಆರೋಗ್ಯದ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು. ನನಗೆ ವೈರಲ್ ಫೀವರ್ ಬಂದಿದೆ ಎಂದು ತಿಳಿಸಿದರು.

Share This Article