ಕಾಲಿವುಡ್ ನಟ ವಿಶಾಲ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರೀಕರಣದಲ್ಲಿ ಸ್ಟಂಟ್ ಮಾಡುವಾಗ ಏಟು ಮಾಡಿಕೊಂಡಿದ್ದರು. ಇದೀಗ ಶೂಟಿಂಗ್ ವೇಳೆಯಲ್ಲಿ ವಿಶಾಲ್‌ಗೆ ಗಂಭೀರ ಗಾಯವಾಗಿದೆ.

View this post on Instagram
ಅದಿಕ್ ರವಿಚಂದ್ರನ್ ನಿರ್ದೇಶನದ `ಮಾರ್ಕ್ ಆ್ಯಂಟನಿ’ ವಿಶಾಲ್ ಪೊಲೀಸ್ ಅಧಿಕಾರಿಯಾಗಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ರೀತು ವರ್ಮಾ ಸಾಥ್ ನೀಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟ ಸೂರ್ಯ ಕೂಡ ಕಾಣಿಸಿಕೊಳ್ತಿದ್ದಾರೆ.
