ಬರಗಾಲದ ಹಿನ್ನೆಲೆ ಜಾನುವಾರುಗಳಿಗೆ ಮೇವು ನೀಡಿದ ವಿನೋದ್ ರಾಜ್

Public TV
1 Min Read

ಸ್ಯಾಂಡಲ್‌ವುಡ್ (Sandalwood) ನಟ ವಿನೋದ್ ರಾಜ್ (Vinod Raj) ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ ಕೂಡ ಸಮಾಜಮುಖಿ ಕೆಲಸ ಮಾಡುತ್ತಾ ಮಾದರಿಯಾಗಿದ್ದಾರೆ. ಇದೀಗ ಬರಗಾಲದ ಹಿನ್ನೆಲೆ ರೈತರ ಜಾನುವಾರುಗಳಿಗೆ ವಿನೋದ್ ರಾಜ್ ಮೇವು ನೀಡಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್ ಕೃಷ್ಣ ನಟನೆಯ ‘ಫಾದರ್’ ಚಿತ್ರಕ್ಕೆ ಏಪ್ರಿಲ್ 27ರಂದು ಮುಹೂರ್ತ

ಪ್ರಾಣಿ ಪಕ್ಷಿ ಸಂರಕ್ಷಣೆ ಮಾಡೋದು ತಾಯಿ ಲೀಲಾವತಿ(Leelavathi) ಅವರ ಆಸೆಯಾಗಿತ್ತು. ಅದರಂತೆಯೇ ವಿನೋದ್ ರಾಜ್ ನಡೆದುಕೊಳ್ತಿದ್ದಾರೆ. ಬರಗಾಲದ ಸಮಯದಲ್ಲಿ ರೈತರಿಗೆ ನಟ ಸಾಥ್ ನೀಡಿದ್ದಾರೆ. ಕೆಆರ್ ಪೇಟೆ ರೈತರಿಗೆ ವಿನೋದ್ ರಾಜ್ ಮೇವು ಕೊಡಿಸಿದ್ದಾರೆ. ಇದೀಗ ನಟನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ವರ್ಷ ಅಂತ್ಯದಲ್ಲಿ ಡಿಸೆಂಬರ್ 8ರಂದು ಲೀಲಾವತಿ ಅವರು ನಿಧನರಾದರು. ಅಮ್ಮನ ಸಾವಿನ ನೋವು ವಿನೋದ್ ರಾಜ್‌ಗೆ ಶಾಕ್ ಕೊಟ್ಟಿತ್ತು. ಕುಟುಂಬದ ಹೊಣೆಯ ನಡುವೆ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.

Share This Article