ಹೊಸ ಸಿನಿಮಾ ಒಪ್ಪಿಕೊಂಡ ವಿಜಯ್ ದೇವರಕೊಂಡ

Public TV
1 Min Read

ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ‘ಫ್ಯಾಮಿಲಿ ಸ್ಟಾರ್’ ಸಿನಿಮಾದ ನಂತರ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ ಆಗಿ ಗಮನ ಸೆಳೆದಿದ್ದ ವಿಜಯ್ ಆ್ಯಕ್ಷನ್ ಅವತಾರದಲ್ಲಿ ಬರಲು ರೆಡಿಯಾಗಿದ್ದಾರೆ.

ನಿರ್ದೇಶಕ ರವಿ ಕಿರಣ್ ಕೋಲ ಜೊತೆ ವಿಜಯ್ ಕೈ ಜೋಡಿಸಿದ್ದಾರೆ. ವಿಜಯ್‌ ಹುಟ್ಟುಹಬ್ಬದಂದು (ಮೇ 9) ಹೊಸ ಚಿತ್ರದ ಟೈಟಲ್ ಅನೌನ್ಸ್ ಕೂಡ ಮಾಡಲಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ‘ಉತ್ತರಕಾಂಡ’ ಚಿತ್ರೀಕರಣ ಶುರು

vijaydevarakonda

‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾದ ಬಳಿಕ ಹೊಸ ಬಗೆಯ ಸ್ಕ್ರೀಪ್ಟ್ ಅನ್ನು ವಿಜಯ್ ಆಯ್ಕೆ ಮಾಡಿದ್ದಾರಂತೆ. ಪಕ್ಕಾ ಮಾಸ್ ಕಮ್ ಆ್ಯಕ್ಷನ್ ಕಥೆಯನ್ನು ವಿಜಯ್ ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ.

ಇದೊಂದೇ ಅಲ್ಲ, ವಿಜಯ್ 12ನೇ ಸಿನಿಮಾದ ಬಗ್ಗೆ ಕೂಡ ಮಾಹಿತಿ ಸಿಗಲಿದೆ. ವಿಜಯ್ ಸಿನಿಮಾಗೆ ಶ್ರೀಲೀಲಾ ಗುಡ್ ಬೈ ಹೇಳಿದ ಮೇಲೆ ಹಲವು ನಟಿಮಣಿಯರ ಹೆಸರು ಕೇಳಿ ಬಂದಿತ್ತು. ಸದ್ಯದಲ್ಲೇ ಈ ಚಿತ್ರದ ನಾಯಕಿಯ ಕುರಿತು ಅಪ್‌ಡೇಟ್ ಸಿಗಲಿದೆ.

Share This Article