Kushi Trailer: ವಿಜಯ್-ಸಮಂತಾ ಲವ್, ಮದುವೆ, ಜಗಳವೇ ಇಲ್ಲಿ ಹೈಲೈಟ್

Public TV
2 Min Read

ವಿಜಯ್ ದೇವರಕೊಂಡ (Vijay Devarakonda)- ಸಮಂತಾ (Samantha) ನಟನೆಯ ‘ಖುಷಿ’ (Kushi)  ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಅಬ್ಬರಿಸೋದಕ್ಕೆ ರೆಡಿಯಾಗಿದೆ. ಸದ್ಯ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ವಿಜಯ್- ಸಮಂತಾ ಪ್ರೀತಿ, ಗುದ್ದಾಟ, ಮುನಿಸು ಎಲ್ಲವೂ ಇಲ್ಲಿ ಮೋಡಿ ಮಾಡ್ತಿದೆ. ಹೆಂಡತಿಗೆ ಒಬ್ಬ ಗಂಡ ಹೇಗಿರಬೇಕು ಎಂದು ಎಂದು ತೋರಿಸೋದೇ ಸಿನಿಮಾದ ಜೀವಾಳ.

ಖುಷಿ ಸಿನಿಮಾದ ಫಸ್ಟ್ ಲುಕ್, ಸಾಂಗ್ಸ್ ಎಲ್ಲವೂ ಈಗಾಗಲೇ ಅಭಿಮಾನಿಗಳನ್ನ ಮೋಡಿ ಮಾಡುತ್ತಿದೆ. ವಿಜಯ್- ಸ್ಯಾಮ್ ಕಾಂಬೋದ ಟ್ರೈಲರ್ ಝಲಕ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ವಿಜಯ್ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ನಾಯಕಿ ಸಮಂತಾ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ- ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ. ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ.

ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ ಕಿರಿಕ್, ಜಗಳ ಇದನ್ನೇ ತಮಾಷೆಯಾಗಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ಇವತ್ತಿನ ಯುವ ಜನತೆ ಮದುವೆಯಾಗಿ ಭಿನ್ನಾಭಿಪ್ರಾಯಗಳಿಂದ ಏನೆಲ್ಲಾ ರಾದ್ಧಾಂತ ಆಗುತ್ತದೆ ಅನ್ನೋದೇ ಖುಷಿ ಸಿನಿಮಾದ ಒನ್‌ಲೈನ್ ಕಥೆ. ಇದನ್ನೂ ಓದಿ:ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಶೂಟಿಂಗ್ ಮರಳಿದ ಪ್ರಭಾಸ್

‘ಖುಷಿ’ ಟ್ರೈಲರ್ ನೋಡಿದರೆ ಸಿನಿಮಾ ಕಥೆ ಏನು ಎನ್ನುವುದು ಅರ್ಥವಾಗಿ ಬಿಡುತ್ತದೆ.ವಿಜಯ್ ದೇವರಕೊಂಡ- ಸಮಂತಾ ಜೋಡಿ ‘ಖುಷಿ’ ಚಿತ್ರದ ಮೂಲಕ ರಿಲೀಸ್ ಆದ್ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಕಾದುನೋಡಬೇಕಿದೆ. ಸೆಪ್ಟೆಂಬರ್ 1ರಂದು ಕನ್ನಡ, ತೆಲುಗು, ತಮಿಳು ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಖುಷಿ ಸಿನಿಮಾ ರಿಲೀಸ್ ಆಗುತ್ತಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್