ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ ಪರ ವಿಜಯ್ ದೇವರಕೊಂಡ (Vijay Devarakonda) ಕೂಡ ಮಾತನಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ವಿಜಯ್ ಕಿಡಿಕಾರಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ‘ಹೆಡ್‌ಬುಷ್’ ನಟಿ ಪಾಯಲ್

ವಿಜಯ್- ರಶ್ಮಿಕಾ (Rashmika) ತೆಲುಗು ಸಿನಿಮಾರಂಗದಲ್ಲಿ ಬೆಸ್ಟ್ ಜೋಡಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇಬ್ಬರ ಬಗ್ಗೆ ಡೇಟಿಂಗ್ ರೂಮರ್ ಇದ್ದರೂ ಕೂಡ ಈ ಜೋಡಿ ಇದನ್ನ ಒಪ್ಪಿಕೊಂಡಿಲ್ಲ. ಆದರೆ ಒಬ್ಬರಿಗೊಬ್ಬರು ಬೆಂಬಲಿಸುತ್ತಲೇ ಬಂದಿದ್ದಾರೆ. ಒಟ್ನಲ್ಲಿ ವಿಜಯ್ ನಡೆ ಫ್ಯಾನ್ಸ್ ಖುಷಿಕೊಟ್ಟಿದೆ.
