ಮತಗಟ್ಟೆಯಲ್ಲಿ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ ತಮಿಳು ನಟ ವಿಜಯ್

Public TV
1 Min Read

ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಇಂದು ಚೆನ್ನೈನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಚಲಾಯಿಸಿದರು.

ಈ ವೇಳೆ ವಿಜಯ್ ನೋಡಲು ಕೆಲ ಜನರ ಗುಂಪು ಹಾಗೂ ಮಾಧ್ಯಮದವರು ನೂಕುನುಗ್ಗಲು ಮಾಡಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಯಿತು. ಇದನ್ನು ಗಮನಿಸಿದ ವಿಜಯ್ ಮತಗಟ್ಟೆಯಲ್ಲಿ ಆಗಿರುವ ಅನಾನುಕೂಲಕ್ಕೆ ಅಲ್ಲಿಯೇ ಕ್ಷಮೆಯಾಚಿಸಿದ್ದಾರೆ. ಇದನ್ನು ಓದಿ: ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಮೇಘನಾ ರಾಜ್

ತಮಿಳುನಾಡಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶನಿವಾರ ಮತದಾನ ಆರಂಭವಾಗಿದೆ. 10 ವರ್ಷಗಳ ನಂತರ ನಡೆಯುತ್ತಿರುವ ಈ ಚುನಾವಣೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಡುವಿನ ಜಿದ್ದಾಜಿದ್ದಿ ಹೋರಾಟವಾಗಿದೆ. ಆದರೆ ಬಿಜೆಪಿ ಕೂಡ ರಾಜ್ಯದಲ್ಲಿ ನೆಲೆಯೂರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದನ್ನು ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ

648 ನಗರ ಸ್ಥಳೀಯ ಸಂಸ್ಥೆಗಳು ಮತ್ತು 12,607 ವಾರ್ಡ್ ಸದಸ್ಯರಿಗೆ ಚುನಾವಣೆ ನಡೆಯುತ್ತಿದೆ. ಒಂಬತ್ತು ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಡಿಎಂಕೆ ತಮ್ಮ ಉತ್ತಮ ಕೆಲಸದ ಬಗ್ಗೆ ಪ್ರಚಾರ ನಡೆಸಿದರೆ, ಎಐಎಡಿಎಂಕೆ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದೆ ಎಂದು ಆರೋಪಿಸುತ್ತಾ ಪ್ರಚಾರ ನಡೆಸಿತು. ಅಲ್ಲದೇ ತಮಿಳುನಾಡಿನ ಹಲವಾರು ಭಾಗಗಳಲ್ಲಿ ಮತಗಾಗಿ ನಗದು ಮತ್ತು ಉಡುಗೊರೆಗಳ ಹಾವಳಿ ಭಾರೀ ಸದ್ದು ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *