ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?

Public TV
1 Min Read

`ಸಿಂಹಪ್ರಿಯ’ ಜೋಡಿಯೆಂದೇ ಖ್ಯಾತಿಗಳಿಸಿದ್ದ ನಟ ವಸಿಷ್ಠ ಸಿಂಹ (Vasishta Simha) ಹಾಗೂ ನಟಿ ಹರಿಪ್ರಿಯಾ (Haripriya) ತಮ್ಮ ಮುದ್ದಾದ ಮಗನಿಗೆ ಕೃಷ್ಣ ಜನ್ಮಾಷ್ಟಮಿಯಂದೇ (Krishna Janmashtami) ನಾಮಕರಣ ಮಾಡಿದ್ದಾರೆ.

ದಂಪತಿಯು ಪುಟ್ಟ ಕೃಷ್ಣನಿಗೆ ವಿಪ್ರಾ ಎನ್ ಸಿಂಹ (Viprah N Simha) ಎಂದು ಹೆಸರಿಟ್ಟಿದ್ದಾರೆ. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025 ಜನವರಿ 26ರಂದು ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದೀಗ ದಂಪತಿಗಳು ಮಗನ ನಾಮಕರಣದ ಸಂಭ್ರಮದಲ್ಲಿದ್ದಾರೆ. ಇದೀಗ ಮೂವರು ಹಳದಿ ಬಣ್ಣದ ಸೇಮ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ಸದ್ಯ ಸಿಂಹಪ್ರಿಯ ಜೋಡಿಯ ಮಗನ ನಾಮಕರಣದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಮಕರಣ ಕಾರ್ಯಕ್ರಮದಲ್ಲಿ ನಟಿ ಪ್ರಣಿತಾ, ಸೊನಾಲ್, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಹಾಗೂ ಇನ್ನಿತರ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ

Share This Article