ಕಡೆಗೂ ಬ್ರೇಕಪ್ ಬಗ್ಗೆ ಮೌನ ಮುರಿದ ‘ಬೃಂದಾವನ’ ಹೀರೋ

Public TV
1 Min Read

ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ವರುಣ್ ಆರಾಧ್ಯ (Varun Aradhya) ಅವರು ‘ಬೃಂದಾವನ’ (Brundavana) ಸೀರಿಯಲ್ ಹೀರೋ ಆಗಿ ಮಿಂಚ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ವರ್ಷಾ ಕಾವೇರಿ ಜೊತೆಗಿನ ತಮ್ಮ ಬ್ರೇಕಪ್ ಬಗ್ಗೆ ವರುಣ್ ಮೌನ ಮುರಿದಿದ್ದಾರೆ.

ಯೂಟ್ಯೂಬ್ ಸ್ಟಾರ್ ವರ್ಷಾ ಮತ್ತು ವರುಣ್ ಅವರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇಬ್ಬರು ಬಿಗ್ ಬಾಸ್‌ಗೆ ಹೋಗಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದೇ ಸುದ್ದಿಯಾಗಿದ್ದರು. ಆದರೆ ದೊಡ್ಮನೆ ಆಟ ಶುರುವಾದ ಮೇಲೆ ಗಾಸಿಪ್‌ಗೆ ಬ್ರೇಕ್ ಬಿದ್ದಿತ್ತು.

ವರ್ಷಾ (Varsha Kaveri) ಮತ್ತು ವರುಣ್ ಆರಾಧ್ಯ ಬ್ರೇಕಪ್ ವಿಚಾರ ತಿಳಿದಿತ್ತು. ಆದರೆ ಬ್ರೇಕಪ್ (Breakup) ಯಾಕೆ ಆಯ್ತು ಎಂಬ ಅಸಲಿ ವಿಚಾರ ಎಲ್ಲೂ ರಿವೀಲ್ ಆಗಿರಲಿಲ್ಲ. ಈಗ ಮೊದಲ ಬಾರಿಗೆ ವರುಣ್ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್ ಬಗ್ಗೆ ಪ್ರಶ್ನೆ ಮಾಡಿದಾಗ ‘ಕಾಲಾಯ ತಸ್ಮೈ ನಮಃ’ ಎಂದು ಹೇಳಿದ್ದಾರೆ. ಇದನ್ನೂ ಓದಿ:Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

ಬ್ರೇಕಪ್ ಆಗಬೇಕು ಅಂತಿತ್ತು ಕಾಣುತ್ತೆ, ಬ್ರೇಕಪ್ ಆಯ್ತು. ಅದರ ಬಗ್ಗೆ ಮತ್ತೇನು ಮಾತು ಬೇಡ ಎಂದು ವರುಣ್ ಮಾತನಾಡಿದ್ದಾರೆ.

Share This Article