ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ವರುಣ್ ತೇಜ್-ಲಾವಣ್ಯ ಜೋಡಿ

By
1 Min Read

ಟಾಲಿವುಡ್‌ನ ಲವ್ ಬರ್ಡ್ಸ್ ವರುಣ್ ತೇಜ್- ಲಾವಣ್ಯ (Lavanya Tripathi) ಜೋಡಿ ಇಂದು (ನವೆಂಬರ್.1) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಇಟಲಿಯಲ್ಲಿ ಬೀಡು ಬಿಟ್ಟಿರುವ ಮೆಗಾಸ್ಟಾರ್ ಕುಟುಂಬದಲ್ಲಿ ಮನೆ ಸಂಭ್ರಮ ಮನೆ ಮಾಡಿದೆ. ನವಜೋಡಿ ವರುಣ್-ಲಾವಣ್ಯ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ.

ವರುಣ್-ಲಾವಣ್ಯರ ಮೆಹೆಂದಿ ಮತ್ತು ಅರಿಶಿನ ಶಾಸ್ತ್ರವು ನಿನ್ನೆ (ಅ.31) ಅದ್ದೂರಿಯಾಗಿ ನಡೆದಿದೆ. ಹಳದಿ ಬಣ್ಣದ ಉಡುಗೆಯಲ್ಲಿ ಹೊಸ ಜೋಡಿ ಮಿಂಚಿದ್ದಾರೆ. ಮೆಗಾಸ್ಟಾರ್ ಕುಟುಂಬದ ಮದುವೆ ಸಂಭ್ರಮದಲ್ಲಿ ನಟ ನಿತಿನ್ (Actor Nithin) ದಂಪತಿ ಕೂಡ ಭಾಗಿಯಾಗಿದ್ದಾರೆ. ಇಂದು‌ (ನ.1) ಮಧ್ಯಾಹ್ನ 2:48ರ ಶುಭಮುಹೂರ್ತದಲ್ಲಿ ವರುಣ್ ಮದುವೆ ನೆರವೇರಲಿದೆ.

‘ಮಿಸ್ಟರ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, ಹಲವು ವರ್ಷಗಳ ಡೇಟಿಂಗ್ ನಂತರ ಈ ವರ್ಷ ಜೂನ್ 9ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಾಗಬಾಬು ಪುತ್ರ ವರುಣ್-ಲಾವಣ್ಯ ಎಂಗೇಜ್‌ಮೆಂಟ್ ಗ್ರ‍್ಯಾಂಡ್ ಆಗಿ ನೆರವೇರಿತ್ತು. ಇದನ್ನೂ ಓದಿ:ನಟ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲು

ಮೊದಲ ಪ್ರೇಮ ನಿವೇದನೆ ಮಾಡಿದ ಸ್ಥಳದಲ್ಲಿಯೇ ಮದುವೆಯಾಗಬೇಕು ಎಂಬ ಮನದಾಸೆಯಂತೆಯೇ ಈಗ ಇಟಲಿಯಲ್ಲಿ ಅದ್ದೂರಿಯಾಗಿ ವರುಣ್(Varun Tej)- ಲಾವಣ್ಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್