ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ

By
1 Min Read

ಟಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ನಟ ಉಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಮೈಸೂರಿಗೆ (Mysore) ಬಂದಿಳಿದಿದ್ದಾರೆ. ಅವರ ನಟನೆಯ ‘ಬೊಯಾಪತಿ ರಾಪೊ’ ಸಿನಿಮಾದ ಶೂಟಿಂಗ್ ಇಂದಿನಿಂದ ನಡೆಯುತ್ತಿದ್ದು ಈ ತಿಂಗಳು 15ನೇ ತಾರೀಖಿನವರೆಗೂ ಅವರು ಮೈಸೂರಿನಲ್ಲೇ ಬೀಡು ಬಿಡಲಿದ್ದಾರೆ. ಸಿನಿಮಾದ ಕೊನೆಯ ಹಂತದ ಚಿತ್ರೀಕರಣ  ಇದಾಗಿದೆ. ಉಸ್ತಾದ್ ರಾಮ್ ಪೋತಿನೇನಿ ಜೊತೆಗೆ ಕನ್ನಡತಿ ಶ್ರೀಲೀಲಾ (Srileela) ಕೂಡ ಇದ್ದಾರೆ.

ಈ ಹಿಂದೆ ಉಸ್ತಾದ್ ರಾಮ್ ಪೋತಿನೇನಿ ಹುಟ್ಟುಹಬ್ಬದಂದು ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ (First Glimpses) ರಿಲೀಸ್ ಆಗಿತ್ತು. ಕೈಯಲ್ಲಿ ಕತ್ತಿ ಹಿಡಿದು, ಎಮ್ಮೆಯೊಟ್ಟಿಗೆ ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ರಾಮ್ ಪೋತಿನೇನಿ ಎಂಟ್ರಿ ಕೊಟ್ಟ ಗ್ಲಿಂಪ್ಸ್ ಸಖತ್ ಸದ್ದು ಕೂಡ ಮಾಡಿತ್ತು. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ : ತಾಯಿ ಆಗಲಿದ್ದಾರೆ ನಟಿ ಸ್ವರಾ ಭಾಸ್ಕರ್

ಮಾಸ್ ಪ್ರಿಯರಿಗೆ ಹೇಳಿಮಾಡಿಸಿದಂತಿರುವ ಈ ಸಿನಿಮಾಗೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಸಾರಥಿ ಬೋಯಾಪಾಟಿ ಸೀನು (Boyapati Seenu) ಆಕ್ಷನ್ ಕಟ್ ಹೇಳಿದ್ದಾರೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ.

 

ಬೋಯಾಪಾಟಿ ಶೀನು ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಪಕ್ಕ ಮಾಸ್ ಎಂಟರ್ ಟೈನರ್ ಜಾನರ್ ನ ಈ ಚಿತ್ರ ಇದೇ ವರ್ಷ ಅಕ್ಟೋಬರ್ 20ರಂದು ವರ್ಲ್ಡ್  ವೈಡ್ ರಿಲೀಸ್ ಆಗಲಿದೆ.

Share This Article