ಪ್ರೀತಿಯ ಅಭಿಮಾನಿಗಳಲ್ಲಿ ಉಪ್ಪಿ ವಿನಂತಿ

Public TV
1 Min Read

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ ಇದೇ ತಿಂಗಳ 18 ರಂದು ಅಂದರೆ ಬುಧವಾರ ಇದೆ. ಈ ಹಿನ್ನೆಲೆಯಲ್ಲಿ ಉಪ್ಪಿ ಅವರು ಪ್ರೀತಿಯ ಅಭಿಮಾನಿಗಳಲ್ಲಿ ಒಂದು ವಿನಂತಿ ಮಾಡಿಕೊಂಡಿದ್ದಾರೆ.

ಉಪೇಂದ್ರ ಅವರು ಟ್ವೀಟ್ ಮಾಡುವ ಮೂಲಕ, ತಮ್ಮ ಹುಟ್ಟುಹಬ್ಬಕ್ಕೆ ಯಾವುದೇ ಕೇಕ್, ಹಾರವನ್ನು ತರಬೇಡಿ. ಬದಲಿಗೆ ಒಂದು ಗಿಡವನ್ನು ತೆಗೆದುಕೊಂಡು ಬನ್ನಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಉಪೇಂದ್ರ ಅವರು, “ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…ಸೆಪ್ಟೆಂಬರ್ 18 “ಅಭಿಮಾನಿಗಳ ದಿನ”. ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ, ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ” ಎಂದು ಬರೆದು ಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶನಿವಾರಷ್ಟೆ ‘ಐ ಲವ್ ಯೂ’ ಸಿನಿಮಾದ 100 ದಿನದ ಸಂಭ್ರಮದ ವೇಳೆ ನಿರ್ದೇಶಕ ಆರ್.ಚಂದ್ರು ಅವರೊಂದಿಗೆ ತಮ್ಮ ಮುಂದಿನ ಬಹುಭಾಷಾ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದರು. ಸಿನಿಮಾಗೆ ‘ಕಬ್ಜಾ’ ಎಂದು ಟೈಟಲ್ ಇಡಲಾಗಿದೆ.

ಇತ್ತೀಚೆಗಷ್ಟೆ ನಟ ಸುದೀಪ್ ಕೂಡ ರಾಜ್ಯದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ, ವಿಜೃಂಭಣೆಯಿಂದ ಹುಟ್ಟಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಅದರಂತೆಯೇ ಅಭಿಮಾನಿಗಳಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದರು.

https://twitter.com/nimmaupendra/status/1172894888213397505

Share This Article
Leave a Comment

Leave a Reply

Your email address will not be published. Required fields are marked *