ವಿಷ್ಣು ಸರ್‌ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ – ನಟ ಉಪೇಂದ್ರ

Public TV
1 Min Read

– ವಿಷ್ಣು ಸಮಾಧಿ ತೆರವು ಬಗ್ಗೆ ಉಪ್ಪಿ ಬೇಸರ

ಮೇರು ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನ (Vishnuvardhan Memorial) ನೆಲಸಮ ಮಾಡಿದ ಹಿನ್ನೆಲೆ ಕರ್ನಾಟಕದಾದ್ಯಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕ ಹಾಗೂ ನಿರ್ಮಾಪಕರುಗಳು ಈ ಘಟನೆಯನ್ನ ಖಂಡಿಸಿದ್ದಾರೆ. ಧೀಮಂತ ನಾಯಕನ ವಿಚಾರದಲ್ಲಿ ಈ ವಿವಾದವನ್ನ ಅವರನ್ನ ಪ್ರೀತಿ ಮಾಡುವ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

View this post on Instagram

 

A post shared by Upendra Kumar (@nimmaupendra)

ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ವಿಷ್ಣುವರ್ಧನ್ ಅವರ ಮೇಲಿನ ಅಪಾರ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಸವಣ್ಣನವರ ವಚನದ ಮೂಲಕ ಈ ಕೃತ್ಯವೆಸಗಿದವರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರ ಸ್ಥಾನ ಎಂತದ್ದು ಎಂದು ಒಂದೇ ವಾಕ್ಯದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‌ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ

ಜಾಲತಾಣದಲ್ಲಿ ಬಸವಣ್ಣವರ ವಚನದ ಸಾಲಿನ ಮೂಲಕ ವಿಷ್ಣು ಅಮರರೆಂದು ಉಪ್ಪಿ ಬರೆದುಕೊಂಡಿದ್ದಾರೆ. ʻಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲʼ ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತʼ ಅಂತ ಬರೆದುಕೊಂಡಿದ್ದಾರೆ ನಟ ಉಪೇಂದ್ರ. ಇದನ್ನೂ ಓದಿ: ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದ ದರ್ಶನ್!

Share This Article