ದಳಪತಿ ವಿಜಯ್‌ ಟಿವಿಕೆ ಪಕ್ಷದ ಸಿಎಂ ಅಭ್ಯರ್ಥಿ – ಬಿಜೆಪಿ, ಡಿಎಂಕೆ ಜೊತೆ ಮೈತ್ರಿ ಇಲ್ಲ

Public TV
2 Min Read

ಚೆನ್ನೈ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ಶುರುವಾಗಿದ್ದು, ನಟ-ರಾಜಕಾರಣಿ ದಳಪತಿ ವಿಜಯ್‌ (Thalapathy Vijay) ಅವರನ್ನ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ (BJP) ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಡಿಎಂಕೆ (DMK) ಜೊತೆಗೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗಿದೆ. ಇದನ್ನೂ ಓದಿ: ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿರುವ ಟಿವಿಕೆ ಪಕ್ಷ ಮುಂದಿನ ತಿಂಗಳಲ್ಲಿ ಬೃಹತ್‌ ರಾಜ್ಯ ಸಮ್ಮೇಳನ ಆಯೋಜಿಸಲು ತಯಾರಿ ನಡೆಸುತ್ತಿದೆ. ಪಕ್ಷದ ಸಿದ್ಧಾಂತಗಳನ್ನ ಜನರಿಗೆ, ಮನೆ ಮನೆಗೆ ಹಳ್ಳಿಗೆ ಹಳ್ಳಿಗೆ ತಲುಪಿಸಲು ಸಾರ್ವಜನಿಕ ಸಭೆಗಳನ್ನು ನಡೆಸಲು ಪ್ಲ್ಯಾನ್‌ ಮಾಡಿದೆ. ಜೊತೆಗೆ ಪಕ್ಷದ ಸದಸ್ಯತ್ವ ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ದೆಹಲಿ ಸರ್ಕಾರದಿಂದ ಯೂಟರ್ನ್ – ಅವಧಿ ಮೀರಿದ ವಾಹನಗಳಿಗೆ ಹೇರಿದ್ದ ಇಂಧನ ನಿಷೇಧ ಆದೇಶ ವಾಪಸ್

ಟಿವಿಕೆ ಇಂದು ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಿತು. ಇದರಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ವಿಜಯ್ಎಂದು ತೀರ್ಮಾನಿಸಿದೆ. ಮುಂದಿನ ತಿಂಗಳು ದೊಡ್ಡ ಮಟ್ಟದ ರಾಜ್ಯ ಸಮ್ಮೇಳನ ನಡೆಸಿ, ಪಕ್ಷದ ಸಿದ್ಧಾಂತವನ್ನು ಹಳ್ಳಿಗಳಿಗೆ ತಲುಪಿಸಲು ತೀರ್ಮಾನಿಸಲಾಗಿದೆ.

ಮೈತ್ರಿಗೆ ನೋ ಎಂದ ವಿಜಯ್
ಇನ್ನೂ ಸಭೆಯಲ್ಲಿ ಮಾತನಾಡಿದ ನಟ ಮತ್ತು ಟಿವಿಕೆ ನಾಯಕ ವಿಜಯ್‌, ಬಿಜೆಪಿಯ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ. ಬಹಿರಂಗವಾಗಿ ಮಾತ್ರವಲ್ಲ, ತೆರೆಮರೆಯಲ್ಲೂ ಮೈತ್ರಿ ಮಾಡಿಕೊಳ್ಳೋದೆ ಇಲ್ಲ ಎಂದು ಖಡಕ್ಆಗಿ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಇಂಗ್ಲಿಷ್ ಭಾಷೆಯ ಕುರಿತಾದ ಹೇಳಿಕೆ ವೈರಲ್ಆಗಿತ್ತು. ಅದನ್ನು ಉಲ್ಲೇಖಿಸಿ ಮಾತನಾಡಿದ ವಿಜಯ್, ಇದು ದುರುದ್ಧೇಶಪೂರಿತ. ಇದರಿಂದಲೇ ತಿಳಿಯುತ್ತದೆ ಮುಂದೆ ತಮಿಳುನಾಡಿನ ಮೇಲೂ ಎರಡು ಭಾಷಾ ನೀತಿ ಹೇರಿಕೆಯಾಗಲಿದೆ ಹೀಗಾಗಿ, ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ನುಡಿದಿದ್ದಾರೆ.

ಬಿಜೆಪಿಯೊಂದಿಗೆ ತಮಿಳುನಾಡಿನಲ್ಲಿ ವಿಷ ಬೀಜ ಬಿತ್ತಲು ಸಾಧ್ಯವಿಲ್ಲ. ಅಣ್ಣಾ ಮತ್ತು ಪೆರಿಯಾರ್ ಅವರನ್ನು ವಿರೋಧಿಸಿ ತಮಿಳುನಾಡಿನಲ್ಲಿ ಗೆಲ್ಲಲು ಸಾಧ್ಯವಿಲ್ಲ. ಡಿಎಂಕೆ ಅಥವಾ AIADMK ಬಿಜೆಪಿ ಜೊತೆಗೂ ಕೈ ಜೋಡಿಸೋದಿಲ್ಲ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: 2026ರ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಗೆಲ್ತೀವಿ – ದಳಪತಿ ವಿಜಯ್‌ ʻವಿಕ್ಟರಿʼ ಮಾತು

Share This Article