2026ರ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಗೆಲ್ತೀವಿ – ದಳಪತಿ ವಿಜಯ್‌ ʻವಿಕ್ಟರಿʼ ಮಾತು

Public TV
2 Min Read

– ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ?

ಚೆನ್ನೈ: ತಮಿಳುನಾಡಿನ ರಾಜಕಾರಣದಲ್ಲಿ ನಟ ಇಳಯ ದಳಪತಿ ವಿಜಯ್ (Thalapathy Vijay) ಸಂಚಲನ ಸೃಷ್ಟಿಸಿದ್ದಾರೆ. ವಿಲ್ಲುಪುರಂನ ವಿಕ್ರವಾಂಡಿಯಲ್ಲಿ `ತಮಿಳಿಗ ವೆಟ್ರಿ ಕಾಳಗಂʼ (Tamizhaga Vetri Kazhagam) ಪಕ್ಷದ ಮೊದಲ ಬೃಹತ್ ಸಮಾವೇಶ ನಡೆಯಿತು. ಮೆಗಾ ರ‍್ಯಾಲಿಯಲ್ಲಿ ಕಣ್ಣು ಹಾಯಿಸಿದ ದೂರವೂ ಜನಸಾಗರವೇ ಸೇರಿತ್ತು. `ನಮ್ಮ ನಾಡು’ ಹೆಸರಿನಲ್ಲಿ ನಡೆಸಿದ ಮೊದಲ ರಾಜಕೀಯ ಭಾಷಣದಲ್ಲೇ ವಿಜಯ್ ಅಬ್ಬರದ ಭಾಷಣ ಮಾಡಿದರು.

ಇನ್ಮೇಲೆ ನಾನು..ನೀನು.. ಅವರು.. ಇವರು.. ಅನ್ನೋದಿಲ್ಲ. ಇನ್ನು ಮಂದೆ ತಮಿಳುನಾಡಿನಲ್ಲಿ `ನಾವುʼ ಆಗಿ ಹೋರಾಡೋಣ. ಕೇವಲ ವಿಜ್ಞಾನ ತಂತ್ರಜ್ಞಾನ ಬದಲಾದರೆ ಸಾಕಾ..? ಯಾಕೆ ರಾಜಕೀಯ.. ರಾಜಕಾರಣಿಗಳು ಬದಲಾಗಬಾರದಾ? ಇನ್ಮೇಲೆ ರಾಜಕಿಯವನ್ನು ಬದಲಾಯಿಸೋಣ.. ಅಭಿವೃದ್ಧಿ ರಾಜಕಾರಣ ಮಾಡೋಣ. ಪೆರಿಯಾರ್, ಕಾಮರಾಜ್ ಅವರ ಮಾರ್ಗದರ್ಶನ, ಮಹಾನ್ ನಾಯಕ ಅಂಬೇಡ್ಕರ್ ಸಂವಿಧಾನದ ಮಾರ್ಗದಲ್ಲಿ ನಡೆಯೋಣ ಅಂತ ಸಮಾಜಸುಧಾರಕಾರು ಹಾಗೂ ತಮಿಳುನಾಡಿನ ಹೋರಾಟಗಾರರನ್ನು ನೆನೆದು ವಿಜಯ್ ಭಾಷಣ ಮಾಡಿದರು.

ಅಲ್ಲದೇ, ನಮ್ಮನ್ನು ನೋಡಿದವರಿಗೆ ಇವರಿಗೆ ವಿವೇಕ ಇದೆ ಅಂತ ಮಾತಾಡಬೇಕು. ಯಾವುದೇ ಕಾರಣಕ್ಕೂ ನಮ್ಮ ರಾಜಕೀಯದಲ್ಲಿ ರಾಜೀ ಅನ್ನೋ ಪದವೇ ಇಲ್ಲ. ಹೆಜ್ಜೆ ಮುಂದಿಟ್ಟಾಗಿದೆ, ಪರಿಣಾಮ ಎದುರಿಸಿ ಮುನ್ನಡೆಯೋಣ. ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯ ಈಗ ಐರನ್ ಮ್ಯಾನ್ – 70.3 ರೇಸ್‌ನಲ್ಲಿ ವಿಜೇತರಾದ ಪ್ರಥಮ ಜನಪ್ರತಿನಿಧಿ!

ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ. ನಾನು ಪಕ್ಕಾ ಪ್ರಾಕ್ಟಿಕಲ್, ಈಜೋಕೆ ಬರದವನು ಮೀನು ಹಿಡೀತಾನಾ ಅಂತ ಟೀಕಿಸ್ತಿದ್ದಾರೆ. ನಾವು ಮೀನು ಹಿಡಿದೇ ತೋರಿಸೋಣ. ಆಲ್ಟರ್‌ನೇಟಿವ್‌ ಪಾಲಿಟಿಕ್ಸ್ ಮಾತಿಲ್ಲ. ನಾನು ಎಕ್ಟ್ರಾ ಲಗೇಜ್ ಆಗಲು ಇಲ್ಲಿ ಬಂದಿಲ್ಲ. ನಮ್ಮ ನಾಡಿಗಾಗಿ ಎಕ್ಟ್ರಾ ಮಾಡಲು ಬಂದಿದ್ದೇನೆ. ಇಲ್ಲಿ ನೀವೆಲ್ಲಾ ಸೇರಿರೋದು ಹಣದಿಂದ ಅಲ್ಲ. ಒಂದು ಒಳ್ಳೇ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ಸೇರಿದ್ದೀರಿ. ನಾವೆಲ್ಲಾ ಒಳ್ಳೆಯದನ್ನು ಮಾಡಲು ಇರುವ ಸೈನಿಕರಿದ್ದಂತೆ. ಸೋಷಿಯಲ್ ಮೀಡಿಯಾದ ಟ್ರೋಲ್‌ಗೆಲ್ಲಾ ಅಂಜಲ್ಲ. ಅಂದ್ರು. 2026ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ನಿಲ್ತೇವೆ, ಬಹುದೊಡ್ಡ ಪಕ್ಷವಾಗಿ ಗೆಲ್ತೇವೆ ಅಂತ ವಿಜಯ ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ 

Share This Article