ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

Public TV
1 Min Read

ವಿಜಯ್ (Vijay Thalapathy) ಸಿನಿಮಾ ಎದುರು ಅಬ್ಬರಿಸಲು ಜ್ಯೂ.ಎನ್‌ಟಿಆರ್ (Jr.Ntr) ರೆಡಿಯಾಗಿದ್ದಾರೆ. ಒಂದೇ ದಿನ ಇಬ್ಬರೂ ಸ್ಟಾರ್ ನಟರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಚಿತ್ರದ ಮುಂದೆ ಪ್ರಶಾಂತ್ ನೀಲ್ ಹಾಗೂ ಜ್ಯೂ.ಎನ್‌ಟಿಆರ್ ನಟನೆಯ ಚಿತ್ರ ರಿಲೀಸ್ ಆಗಲಿದೆ. ಇದರಿಂದ ಮುಂದಿನ ವರ್ಷ ಸಂಕ್ರಾಂತಿಗೆ ಸ್ಟಾರ್ ವಾರ್ ಶುರುವಾಗಲಿದ್ಯಾ? ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.‌

ಜ್ಯೂ.ಎನ್‌ಟಿಆರ್ ನಟನೆಯ ಹೊಸ ಸಿನಿಮಾ ಮುಂದಿನ ವರ್ಷ ಜ.9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಇದೇ ದಿನ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಕೂಡ ರಿಲೀಸ್ ಆಗ್ತಿದೆ. ಹಾಗಾಗಿ ಸ್ಟಾರ್ ವಾರ್ ನಡೆಯುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

ಈ ಹಿಂದೆ ವಿಜಯ್ ನಟನೆಯ ‘ಬೀಸ್ಟ್’ (Beast) ಸಿನಿಮಾ ಮುಂದೆ ಯಶ್ ನಟನೆಯ ‘ಕೆಜಿಎಫ್ 2’ (KGF 2) ರಿಲೀಸ್ ಭರ್ಜರಿ ಯಶಸ್ಸು ಕಂಡಿತ್ತು. ಬೀಸ್ಟ್ ಚಿತ್ರ ಹೀನಾಯವಾಗಿ ಸೋಲು ಕಂಡಿತ್ತು. ಈಗ ಮತ್ತೆ ಪ್ರಶಾಂತ್ ನೀಲ್ ನಿರ್ದೇಶನದ ಜ್ಯೂ.ಎನ್‌ಟಿಆರ್ ಸಿನಿಮಾ ಬರುತ್ತಿದೆ. ಈ ಎರಡು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕ್ಲ್ಯಾಶ್ ಆಗೋ ಸಾಧ್ಯತೆ ಇದೆ. ಹಾಗಾಗಿ ಇಬ್ಬರಲ್ಲಿ ಒಬ್ಬರಾದರು ರಿಲೀಸ್ ಡೇಟ್ ಮುಂದಕ್ಕೆ ಹಾಕ್ತಾರಾ? ಎಂದು ಈಗ ಚರ್ಚೆ ನಡೆಯುತ್ತಿದೆ.

ಅಂದಹಾಗೆ, ‘ಜನ ನಾಯಗನ್’ ಚಿತ್ರವನ್ನು ಕನ್ನಡದ ಖ್ಯಾತ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ನಟಿಸುತ್ತಿದ್ದಾರೆ.

Share This Article