ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್‌ ಫೋಟೋ!

Public TV
1 Min Read

ಲಕ್ನೋ: ಪಡ್ಡೆ ಹುಡುಗರ ಹಾಟ್‌ ಫೇವರೇಟ್‌, ನಟಿ ಸನ್ನಿಲಿಯೋನ್‌ ಅವರು ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ (Sunny Leone) ಫೋಟೋ ಕಂಡುಬಂದಿದೆ.

ಹೌದು. ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ (UP Police Recruitment Exam) ಪ್ರವೇಶ ಪತ್ರದಲ್ಲಿ ನಟಿ ಫೋಟೋ ಕಾಣಿಸಿಕೊಂಡಿದೆ. ಸದ್ಯ ಈ ಪ್ರವೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಏರ್‌ಪೋರ್ಟ್ ಸ್ಫೋಟಿಸುತ್ತೇನೆ- ‌ ಬೆದರಿಕೆ ಕರೆ ಮಾಡಿ ಮೊಬೈಲ್‌ ಸ್ವಿಚ್ಛ್‌ ಆಫ್‌ ಮಾಡ್ಕೊಂಡ!

ಫೇ. 17 ರಂದು ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿ (UPPRPB)ಯು ರಾಜ್ಯದ 2,385 ಪರೀಕ್ಷಾ ಕೇಂದ್ರಗಳೊಂದಿಗೆ 75 ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ನಡೆಸಿತು. ಇದರಲ್ಲಿ ಕನೌಜ್‌ನ ತಿರ್ವಾ ತಹಸಿಲ್‌ನಲ್ಲಿರುವ ಶ್ರೀಮತಿ ಸೋನೆಶ್ರೀ ಸ್ಮಾರಕ ಬಾಲಕಿಯರ ಕಾಲೇಜು ಕೂಡ ಒಂದು ಪರೀಕ್ಷಾ ಕೇಂದ್ರವಾಗಿತ್ತು. ಇಲ್ಲಿ ಸನ್ನಿಲಿಯೋನ್ ಅವರ ಫೋಟೋದೊಂದಿಗೆ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿಯ (UPPRB) ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಲಾಗಿದೆ.

Share This Article