ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ, ನೀವು ಕೈಜೋಡಿಸಿ- ಅಭಿಮಾನಿಗಳಿಗೆ ಕಿಚ್ಚ ಮನವಿ

Public TV
2 Min Read

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಸಿನಿಮಾ ಹೊರತುಪಡಿಸಿ ಸಮಾಜಮುಖಿ ಕೆಲಸದಲ್ಲೂ ಮುಂದಿದ್ದಾರೆ. ಸದಾ ಸಂಕಷ್ಟದಲ್ಲಿರುವವ ನೆರವಿಗೆ ಸುದೀಪ್ ನಿಲ್ಲುತ್ತಾರೆ. ಇದೀಗ ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ಸುದೀಪ್ ಮನವಿ ಮಾಡಿದ್ದಾರೆ.‌ ಇದನ್ನೂ ಓದಿ:ಟಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ ‘ಲಕ್ಕಿ ಭಾಸ್ಕರ್‌’ ನಿರ್ಮಾಪಕ ನಾಗ ವಂಶಿ

ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಿಚ್ಚನ ನಮಸ್ತೇ. ವಿಡಿಯೋ ಮಾಡಲು ಬಹಳ ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಪುಟ್ಟ ಮಗಳು (Baby Girl) ಇದ್ದಾಳೆ. ಮಗುವಿನ ಹೆಸರು ಕೀರ್ತನಾ. ಆ ಮುಗ್ಧ ಕಂದಮ್ಮನಿಗೆ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ (SMA2) ಎಂಬ ಆರೋಗ್ಯ ಸಮಸ್ಯೆ ಇದೆ. ಇದು ಬಹಳ ಅಪರೂಪದ ಕಾಯಿಲೆ. ಈ ಕಾಯಿಲೆಗೆ ಔಷಧಿ ಇದೆ. ಗುಣ ಆಗುವ ಸಾಧ್ಯತೆಯಿದೆ ಆದರೆ ಆ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಹಣ ಎಷ್ಟು ಎಂದು ಕೇಳಿದಂತೆ ಮೈ ಜುಮ್ ಅನಿಸುತ್ತದೆ. ಈ ಚಿಕಿತ್ಸೆ ಬೇಕಾಗಿರುವುದು 16 ಕೋಟಿ ರೂ..ಪೋಷಕರು ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದ ಸಹಾಯ ನಾನು ಮಾಡಿದ್ದೀನಿ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಸುದೀಪ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಂತಿಮ ಘಟ್ಟ ತಲುಪಿಕೊಂಡ ಸುಚೇಂದ್ರ ಪ್ರಸಾದ್ ನಿರ್ದೇಶನ ‘ಪದ್ಮಗಂಧಿ’!

ಮಗುವಿನ ಚಿಕಿತ್ಸೆಗಾಗಿ ನಿಂತ ಸುದೀಪ್ ನಡೆ ನೋಡಿ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಎಲ್ಲರೂ ಕೈಲಾದಷ್ಟು ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಸುದೀಪ್ ಮನವಿ ಮಾಡಿರೋದು ನೋಡಿ ಫ್ಯಾನ್ಸ್ ಭೇಷ್ ಎಂದಿದ್ದಾರೆ.

 

View this post on Instagram

 

A post shared by PUBLiC TV (@publictv)

ಅಂದಹಾಗೆ, ‘ಮ್ಯಾಕ್ಸ್’ ಸಕ್ಸಸ್ ಬಳಿಕ ಹೊಸ ಸಿನಿಮಾದ ತಯಾರಿ ಬ್ಯುಸಿಯಾಗಿದ್ದಾರೆ. ‘ವಿಕ್ರಾಂತ್ ರೋಣ’ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಮತ್ತೆ ಸುದೀಪ್ ಕೈಜೋಡಿಸಿದ್ದಾರೆ.

Share This Article