ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚನ ಪುತ್ರಿ ಸಾನ್ವಿ?

Public TV
1 Min Read

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಪುತ್ರಿ ಸಾನ್ವಿ (Sanvi Sudeep) ಗಾಯಕಿಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದರ ನಡುವೆ ನಟಿಯಾಗಿಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆ ಕಾರಣ, ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಶೇರ್ ಮಾಡಿರುವ ಹೊಸ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಮಿಲನಾ ದಂಪತಿ

ಸುದೀಪ್ ಮಗಳು ಸಾನ್ವಿ ಸದ್ದಿಲ್ಲದೇ ನಟಿಯಾದ್ರಾ? ಸಿಂಗರ್ ಆಗಿ ಪರಿಚಯವಾಗಿದ್ದ ಈ ಸ್ಟಾರ್ ಕಿಡ್. ಏಕಾಏಕಿ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಖಡಕ್ ವಿಲನ್ ಲುಕ್‌ನಲ್ಲಿ ಗನ್ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟ್‌ಗೆ ಲೈಟ್‌, ಕ್ಯಾಮೆರಾ, ಆಕ್ಷನ್‌ ಅಂತ ಸಾನ್ವಿ ಅಡಿಬರಹ ನೀಡಿದ್ದಾರೆ. ಹೀಗಾಗಿ ಅಭಿಮಾನಿಗಳು ತಲೆಯಲ್ಲಿ ಹುಳು ಬಿಟ್ಟುಕೊಂಡಿದ್ದಾರೆ.

 

View this post on Instagram

 

A post shared by Sanvi Sudeep (@sanvisudeepofficial)

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಸುದೀಪ್ ನಟನೆಯ ‘ಮ್ಯಾಕ್ಸ್’ ಸೆಟ್‌ನದ್ದು ಎಂದು ಹೇಳಲಾಗುತ್ತಿದೆ. ಶೂಟಿಂಗ್ ಮಧ್ಯೆ ತಮಾಷೆಗಾಗಿ ಕಿಚ್ಚನ ಪುತ್ರಿ ಇಂಥದ್ದೊಂದು ಪೋಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮುಂದಿನ ದಿನದಲ್ಲಿ ನಟಿಯಾಗಿ ಎಂಟ್ರಿ ಕೊಟ್ಟರೂ ಅಚ್ಚರಿಯೇನೂ ಇಲ್ಲ.

ಸಾನ್ವಿ ಗಾಯನದ ಕೆಲವು ವಿಡಿಯೋಗಳನ್ನು ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ನಟನೆಗೂ ಎಂಟ್ರಿ ಕೊಟ್ಟರೆ ಚೆನ್ನಾಗಿರುತ್ತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಸಿಹಿಸುದ್ದಿ ಸಿಗುತ್ತಾ? ಕಾಯಬೇಕಿದೆ.

Share This Article