ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

Public TV
2 Min Read

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಕಾರ್ಯಕ್ರಮವು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, 62 ದಿನಗಳನ್ನು ಪೂರೈಸಿದೆ. ಸದ್ಯ ಬಿಗ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದು, ಇದರಲ್ಲಿ ಒಬ್ಬರು ಇಂದು ಹೊರ ಹೋಗಲಿದ್ದಾರೆ. ಅದು ಯಾರು ಎಂಬುದೇ ಸೀಕ್ರೆಟ್. ಇದರ ನಡುವೆ ಶೋಭಾ ಶೆಟ್ಟಿ (Shobha Shetty) ಪ್ರೇಕ್ಷಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನನಗೆ ಬಿಗ್ ಬಾಸ್ ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಸುದೀಪ್ ಮುಂದೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಡ್ಯಾನ್ಸ್- ‘ಪುಷ್ಪ 2’ ಪ್ರೋಮೋ ಔಟ್

ಭಾನುವಾರದ ಎಪಿಸೋಡ್‌ನ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಶೋಭಾ ಅವರೇ ನೀವು ಸೇಫ್ ಎಂದು ಸುದೀಪ್ (Sudeep) ಹೇಳಿದ್ದಾರೆ. ಆದರೆ ಇದಕ್ಕೆ ಅಳುತ್ತಲೇ ಶೋಭಾ ಶೆಟ್ಟಿ, ಸರ್ ನನಗೆ ಎಲ್ಲೋ ಒಂದು ಕಡೆ ಇಲ್ಲಿ ಇರೋಕೆ ಆಗುತ್ತಿಲ್ಲ ಅನಿಸುತ್ತಿದೆ. ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗೆಲ್ಲಾ ಗಾಬರಿಯಿಂದ ಶೋಭಾರನ್ನು ನೋಡಿದ್ದಾರೆ. ಬಿಗ್ ಬಾಸ್‌ನಿಂದ ನನ್ನನ್ನು ಕಳುಹಿಸಿ ಎಂದು ಕೈ ಮುಗಿದು ಅಂಗಲಾಚಿರುವ ಶೋಭಾ ಕೇಳಿಕೊಂಡಿದ್ದಾರೆ.

ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ. ನಿಮ್ಮನ್ನು ಸೇಫ್ ಮಾಡಿದರಲ್ಲ ಜನ, ಅವರಿಗೆ ಈ ತರ ಉತ್ತರ ಕೊಡೋಕೆ ಆಗಲ್ಲ. ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿಮಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ.

ಆದರೆ ಈ ವೇಳೆ ಶೋಭಾ ಶೆಟ್ಟಿ ಕಣ್ಣೀರಲ್ಲೇ ಕೈ ಮುಗಿದು, ನನಗೆ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನಿಸುತ್ತಿದೆ ಸರ್. ಇಲ್ಲಿ ಇರೋರ್ ನಿರೀಕ್ಷೆ ರೀಚ್ ಆಗೋದು ಕಷ್ಟ ಅನಿಸುತ್ತಿದೆ. ಹೋದ ಮೇಲೆ ಪೇಸ್ ಮಾಡುವುದು ಹೇಗಂತ ಗೊತ್ತಾಗುತ್ತಿಲ್ಲ. ಆಡಬೇಕು, ಇರಬೇಕೆಂದು ಇದೆ. ಆದರೆ ಭಯವಾಗುತ್ತಿದೆ ಎಂದಿದ್ದಾರೆ. ಶೋಭಾ ಶೆಟ್ಟಿ ಕಣ್ಣೀರು ಹಾಕುವಾಗ ಚೈತ್ರಾ ಅವರ ಸಮಾಧಾನ ಮಾಡುತ್ತಿದ್ದರು.

ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ (Bigg Boss Telugu 7) ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗರ‍್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

Share This Article