ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

Public TV
1 Min Read

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮದಿನದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಶಿವಣ್ಣ ಭೇಟಿ ಕೊಟ್ಟ ಬೆನ್ನಲ್ಲೇ ಶ್ರೀಮುರಳಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಶ್ರೀಮುರಳಿ, ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು ಎಂದಿದ್ದಾರೆ. ಇದನ್ನೂ ಓದಿ:‘ಎಕ್ಕ’ ಸಿನಿಮಾದ ಫಸ್ಟ್‌ ಸಾಂಗ್‌ ಔಟ್- ಯುವ ರಾಜ್‌ಕುಮಾರ್ ಜಬರ್ದಸ್ತ್ ಪರ್ಫಾಮೆನ್ಸ್

ಅಪ್ಪು ಮಾವನ 50ನೇ ವರ್ಷದ ಹುಟ್ಟುಹಬ್ಬ. ಈ ವರ್ಷ ನೋಡಿಕೊಂಡು ಹೋಗೋಣ ಅಂತ ಬಂದಿದ್ದೇವೆ. ಅಪ್ಪು ಮಾಮ ಎಲ್ಲೇ ಇದ್ದರೂ ನಗು ನಗುತ್ತಾ ಚೆನ್ನಾಗಿರಲಿ, ಅವರನ್ನ ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ. ಎಲ್ಲೋ ಒಂದು ಕಡೆ ನಮ್ಮ ಜೊತೆನೇ ಇದ್ದಾರೆ ಅನ್ನೋ ನಂಬಿಕೆಯಿದೆ. ಅಭಿಮಾನಿಗಳ ಪ್ರೀತಿಗೆ ನಾವು ಚಿರಋಣಿ. ಅವರಿಂದಲೇ ನಾವು, ಅವರೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

‘ಅಪ್ಪು’ ಸಿನಿಮಾ ಮೊದಲೇ ನೋಡಿದ್ದೇನೆ. ‘ಅಪ್ಪು’ ರೀ-ರಿಲೀಸ್ ಅಭಿಮಾನಿಗಳ ದಿನ ಎಂದಿದ್ದಾರೆ. ಅವರು ನೋಡಿ ಹೇಗೆ ಸಂಭ್ರಮಿಸುತ್ತಾರೋ, ಅದನ್ನು ನೋಡಿ ನಾವು ಸಂಭ್ರಮಿಸುತ್ತೇವೆ. ಇನ್ನೂ ನನಗೆ ಗೊತ್ತಿರೋದು ಒಬ್ಬರೇ ಅಪ್ಪು ಮಾಮ, ಅವರೇ ಪವರ್ ಸ್ಟಾರ್. ಅವರಂತೆ ಮತ್ತೊಬ್ಬರು ಇಲ್ಲ. ಅವರ ಹಾಗೇ ಆಗೋದಕ್ಕೂ ಅಸಾಧ್ಯ ಎನ್ನುತ್ತಾ ಶ್ರೀಮುರಳಿ ಭಾವುಕರಾಗಿದ್ದಾರೆ.

Share This Article