ಟಿಕ್‌ಟಾಕ್ ಸ್ಟಾರ್ ಖಾಬಿ ಜೊತೆ ಸೋನು ಸೂದ್ ರೀಲ್ಸ್

Public TV
2 Min Read

ಬಿಟೌನ್ ಸ್ಟಾರ್ ಸೋನು ಸೂದ್ (Sonu Sood) ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಖಾಬಿ(Khaby) ಜೊತೆ ಸೇರಿ, ತಮಾಷೆಯಾದ ವೀಡಿಯೋವೊಂದನ್ನ ಮಾಡಿದ್ದಾರೆ. ಈ ವೀಡಿಯೋ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ನಟ ಸೋನು ಸೂದ್, ಖ್ಯಾತ ಟಿಕ್‌ಟಾಕರ್ (Tiktoker) ಖಾಬಿಗೆ ಸಾಥ್ ನೀಡಿದ್ದಾರೆ. ಖಾಬಿ ಜೊತೆಗೂಡಿ ತಮಾಷೆಯಾಗಿ ವಿಡಿಯೋವೊಂದನ್ನು ಮಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 40 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುವ ಸೋನು ಅವರ ಇನ್ಸ್ಟಾಗ್ರಾಂ (Instagram) ಪೇಜ್‌ನಲ್ಲಿ ಸದಾ ಸ್ಪೂರ್ತಿಗಳಿಂದ ತುಂಬಿ ಪೋಸ್ಟ್‌ಗಳು ಇರುತ್ತವೆ. ಇದೀಗ ಸೋನು ಅವರ ಈ ಹಾಸ್ಯದ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಜ್ಯೂಸ್ ಕುಡಿಯಲು ಸಿದ್ಧತೆ ಮಾಡುತ್ತಿದ್ದಾರೆ. ಸೋನು ಎರಡು ಗ್ಲಾಸ್‌ಗಳನ್ನು ಇಟ್ಟು ಅವುಗಳಿಗೆ ಒಂದು ಗ್ಲಾಸ್‌ಗೆ ಹೆಚ್ಚು ಒಂದು ಗ್ಲಾಸ್‌ಗೆ ಕಡಿಮೆ ಐಸ್ ಹಾಕುತ್ತಾರೆ. ನಂತರ ಜಗ್‌ನಲ್ಲಿರುವ ಜ್ಯೂಸ್ ಅನ್ನು ತಮ್ಮ ಕಾಬಿ ಮುಂದೆ ಇರುವ ಗ್ಲಾಸ್‌ಗೆ ಪೂರ್ಣವಾಗಿ ಹಾಕಿ ಅದು ಗ್ಲಾಸ್ ತುಂಬಿದ ನಂತರ ಉಳಿವ ಸ್ವಲ್ಪವೇ ಸ್ವಲ್ಪವನ್ನು ತಮ್ಮ ಮುಂದಿದ್ದ ಗ್ಲಾಸ್‌ಗೆ ಹಾಕುತ್ತಾರೆ. ನಂತರ ತಮ್ಮ ಬಳಿ ಇದ್ದ ಒಂದು ಸ್ಟ್ರಾವನ್ನು ಗ್ಲಾಸ್‌ಗೆ ಹಾಕುತ್ತಾರೆ. ಈ ವೇಳೆ ಖಾಬಿ ತಮ್ಮ ಗ್ಲಾಸ್ ಅನ್ನ ಬಿಟ್ಟು ಸ್ವಲ್ಪವೇ ಜ್ಯೂಸ್ ಇರುವ ಗ್ಲಾಸ್ ತೆಗೆದುಕೊಳ್ಳಲು ಮುಂದಾಗುವಂತೆ ಕಾಣುತ್ತಾರೆ ಆದರೆ ಅವರು ಕಣ್ಣು ಹಾಕಿದ್ದು, ಕಡಿಮೆ ಜ್ಯೂಸ್ ಇರುವ ಗ್ಲಾಸ್ ಮೇಲಲ್ಲ. ಅದರಲ್ಲಿರುವ ಸ್ಟ್ರಾದ ಮೇಲೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

 

View this post on Instagram

 

A post shared by Khaby Lame (@khaby00)

ಆದರೆ ಸೋನು ಭಾವಿಸುವುದು, ಕಾಬಿ ತನಗೆ ಹೆಚ್ಚು ಜ್ಯೂಸ್ ಇರುವ ಗ್ಲಾಸ್ ಅನ್ನು ನಾನು ಕುಡಿಯಲಿ ಎಂದು ಭಾವಿಸಿ ಆತ ಕಡಿಮೆ ಜ್ಯೂಸ್ ಇರುವ ಗ್ಲಾಸ್ ತೆಗೆದುಕೊಂಡಿದ್ದಾನೆ ಎಂದು ಭಾವಿಸುತ್ತಾರೆ. ಹೀಗಾಗಿ ಕಡಿಮೆ ಇರುವ ಜ್ಯೂಸ್ ಗ್ಲಾಸ್‌ನ್ನು ಸೋನು ತೆಗೆಯಲು ಬಿಡುವುದಿಲ್ಲ. ಆದರೆ ಖಾಬಿ ಮಾತ್ರ ನೋಡುವಷ್ಟು ನೋಡಿ ಸೋನು ಗ್ಲಾಸ್‌ನಲ್ಲಿದ್ದ ಸ್ಟ್ರಾ ಎತ್ತಿಕೊಂಡು ಏನು ಆಗದವಂತೆ ಜ್ಯೂಸ್ ಕುಡಿಯುತ್ತಾನೆ. ಈ ವೇಳೆ ದಂಗಾಗುವ ಸ್ಥಿತಿ ಸೋನು ಸೂದ್‌ದಾಗಿದ್ದು, ಸೋನು ಕೈ ಕೈ ಹಿಸುಕುತ್ತಾ ಜ್ಯೂಸ್ ತಮ್ಮ ಗ್ಲಾಸ್‌ನಲ್ಲಿರುವ ಸ್ವಲ್ಪ ಜ್ಯೂಸ್ ಅನ್ನು ಕುಡಿಯುತ್ತಾರೆ. ಈ ವಿಡಿಯೋವನ್ನು 40 ಮಿಲಿಯನ್‌ಗೂ ಅಧಿಕ ವಿವ್ಸ್ ಪಡೆದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *