ಕೆ ಮಂಜು ಪುತ್ರ ನಟ, ಶ್ರೇಯಸ್ ಕಾರು ಅಪಘಾತ- ಅಪಾಯದಿಂದ ಪಾರು

By
0 Min Read

ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಖ್ಯಾತ ನಿರ್ಮಾಪಕ ಕೆ ಮಂಜು (K Manju) ಪುತ್ರ ಶ್ರೇಯಸ್ ಕೆ ಮಂಜು (Shreyas Manju) ಕಾರು ಅಪಘಾತಕ್ಕೀಡಾಗಿದೆ.

‘ವಿಷ್ಣುಪ್ರಿಯಾ’ ಪ್ರಮೋಷನ್‌ ಮಾಡಲು ಬೆಂಂಗಳೂರಿನಿಂದ ದಾವಣಗೆರೆಗೆ ಶ್ರೇಯಸ್ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದರು. ಶಿರಾ ಬಳಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ನಡೆದಿದೆ.

ಓವರ್‌ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಅವರಿದ್ದ ಕಾರಿಗೆ ಗುದ್ದಿಕೊಂಡ ಹೋಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಶ್ರೇಯಸ್ ಮಂಜು ಮತ್ತು ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

Share This Article