ಚಿತ್ರೀಕರಣಕ್ಕೆ ಬ್ರೇಕ್‌, ಪತ್ನಿ ಗೀತಾ ಜೊತೆ ಶಿವಣ್ಣ ಸಿಟಿ ರೌಂಡ್ಸ್

Public TV
1 Min Read

ಸ್ಯಾಂಡಲ್‌ವುಡ್ (Sandalwood) ನಟ ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲೂ ಆಕ್ಟೀವ್ ಆಗಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ಇಂದು(ಜುಲೈ 25) ರಂದು ಮಂಗಳವಾರ ಬೆಂಗಳೂರಿನಲ್ಲಿ ಪತ್ನಿ ಗೀತಾ ಜೊತೆ ಸಿಟಿ ರೌಂಡ್ ಹೊಡೆದಿದ್ದಾರೆ. ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

‘ವೇದ’ (Vedha) ಸಿನಿಮಾದ ಸೂಪರ್ ಸಕ್ಸಸ್ ನಂತರ ಘೋಸ್ಟ್, ಭೈರತಿ ರಣಗಲ್, ಕ್ಯಾಪ್ಟನ್ ಮಿಲ್ಲರ್, ಜೈಲರ್, ಟಗರು 2 ಸೇರಿದಂತೆ ಹಲವು ಸಿನಿಮಾಗಳು ಶಿವಣ್ಣ ಕೈಯಲ್ಲಿದೆ. ಶೂಟಿಂಗ್ ಮೂಡ್‌ನಿಂದ ಹೊರಬಂದು ಪತ್ನಿ ಗೀತಾ ಮತ್ತು ತಮ್ಮ ಅಭಿಮಾನಿಗಳ ಜೊತೆ ಶಿವಣ್ಣ ಕಾಲ ಕಳೆದಿದ್ದಾರೆ.

ಬೆಂಗಳೂರಿನ ದೇವಸ್ಥಾನವೊಂದಕ್ಕೆ ಶಿವಣ್ಣ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಶಿವರಾಜ್‌ಕುಮಾರ್ ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಇದನ್ನೂ ಓದಿ:ಕಮ್‌ಬ್ಯಾಕ್ ಆಗ್ತಿರೋ ಅನುಷ್ಕಾ ಶೆಟ್ಟಿ ಸಿನಿಮಾದಿಂದ ದೂರವಾಗಿದ್ಯಾಕೆ? ಇಲ್ಲಿದೆ ಅಪ್‌ಡೇಟ್

ಹಾಗಾಗಿ ಫ್ಯಾನ್ಸ್ ಸೆಲ್ಫಿ ಕೇಳಿದಾಗ ನೋ ಅನ್ನೋದು ತೀರಾ ಕಡಿಮೆ. ಅಭಿಮಾನಿಗಳ ಪ್ರೀತಿಗೆ ಅವರ ಜೊತೆ ಫೋಟೋ ಪೋಸ್ ಕೊಡುವ ಮೂಲಕ ಖುಷಿಪಡಿಸಿದ್ದಾರೆ. ಮಹಿಳಾ ಮಣಿಯರ ಜೊತೆ ಶಿವಣ್ಣ ದಂಪತಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಬಳಿಕ ಹೋಟೆಲ್‌ವೊಂದರಲ್ಲಿ ಶಿವಣ್ಣ ದಂಪತಿ ಸಿಹಿ ಸವಿದಿದ್ದಾರೆ. ಈ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್, ಕಡ್ಡಿಪುಡಿ ಚಂದ್ರು ಅವರು ಕೂಡ ಶಿವಣ್ಣ ದಂಪತಿ ಜೊತೆ ಸಾಥ್ ನೀಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್