ಹೆಂಡತಿ ಎಂಪಿ ಆಗಲಿ ಎಂಬ ಆಸೆಯಿದೆ- ಪಾಲಿಟಿಕ್ಸ್ ಬಗ್ಗೆ ಶಿವಣ್ಣ ಮಾತು

Public TV
1 Min Read

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಶಿವಮೊಗ್ಗದಲ್ಲಿ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಪತ್ನಿ ಗೀತಾ (Geetha Shivarajkumar) ರಾಜಕೀಯವಾಗಿ (Politics) ಬೆಳೆಯಬೇಕು. ಪತ್ನಿ ಸಂಸದೆ ಆಗಬೇಕು ಎಂದು ಶಿವಣ್ಣ ಬೆಂಬಲಿಸಿ ಮಾತನಾಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ ಶಿವರಾಜ್‌ಕುಮಾರ್ ದಂಪತಿ ಶಿವಮೊಗ್ಗಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ ನನ್ನ ಪತ್ನಿ ಎಂಪಿ ಆಗಲಿ, ಎಂಎಲ್‌ಎ ಆಗಲಿ ಎಂಬ ಆಸೆಯಿದೆ. ಈ ಮೂಲಕ ಮಹಿಳೆಯರಿಗೆ ಪತ್ನಿ ಗೀತಾ ಮಾದರಿಯಾಗಲಿ ಎಂದಿದ್ದಾರೆ ಶಿವಣ್ಣ.

ಒಬ್ಬ ಗಂಡನಾಗಿ ಗೀತಾಗೆ ಬೆಂಬಲಿಸುತ್ತೇನೆ. ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆ ಗಮನ ನೀಡಿಲ್ಲ. ಉತ್ತಮ ಕೆಲಸಗಳ ಮೂಲಕ ಜನರೊಂದಿಗೆ ಇದ್ದರೆ ಸಾಕು ಎಂದು ಶಿವಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್‌ಗೆ ಮುಂದಾದ್ರಾ ನಯನತಾರಾ, ವಿಘ್ನೇಶ್ ಶಿವನ್?

ಇನ್ನೂ ಪತ್ನಿ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಿವಣ್ಣ ತಿಳಿಸಿದ್ದಾರೆ.

Share This Article