ಕಾವೇರಿ ನೀರಿಗಾಗಿ ಸರ್ಕಾರಕ್ಕೆ ನಾವು ಒತ್ತಡ ತರಬೇಕು- ಶಿವಣ್ಣ

Public TV
1 Min Read

ನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ (Shivarajkumar) ಅವರು ಕಾವೇರಿ ನೀರಿನ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಕ್ಕೆ ನೀರಿನ ಸಮಸ್ಯೆ ಬಗ್ಗೆ ಒತ್ತಡ ತರಬೇಕು ಎಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್

ಕಾವೇರಿ ನೀರಿನ ವಿಚಾರದ ಕುರಿತು ಮಾತನಾಡಿದ ಶಿವಣ್ಣ, ಸರ್ಕಾರಕ್ಕೆ ನಾವು ಒತ್ತಡ ತರಬೇಕು. ಯಾವ ರೀತಿ ತರಬೇಕು ಅನ್ನೋದನ್ನು ಎಲ್ಲರೂ ತೀರ್ಮಾನ ಮಾಡಬೇಕು. ಎರಡೂ ಸರ್ಕಾರ ಸೇರಿ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಮಧ್ಯೆ ಪ್ರವೇಶ ಮಾಡಿದ್ರೆ ಮಾತ್ರ ಸಮಸ್ಯೆ ಇತ್ಯರ್ಥ ಆಗುತ್ತದೆ ಎಂದಿದ್ದಾರೆ.

ರಾಜಕೀಯಕ್ಕೆ (Politics) ಬರುವ ಬಗ್ಗೆ ಶಿವರಾಜ್‌ಕುಮಾರ್ ತಮ್ಮ ನಿಲುವು ಏನು ಎಂಬುದನ್ನು ಈ ವೇಳೆ ಹೇಳಿದ್ದಾರೆ. ನಾನು ರಾಜಕೀಯಕ್ಕೆ ಬರಲ್ಲ. ಗೀತಾ ರಾಜಕೀಯಕ್ಕೆ ಬರ್ತಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ವರ್ಧೆ ಮಾಡ್ತಾರೋ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ಸ್ಪರ್ಧೆ ಮಾಡ್ತಾರೆ. ಅವರ ಜೊತೆ ನಾನು ಇದ್ದೆ ಇರ್ತೀನಿ ಎಂದಿದ್ದಾರೆ. ಇದನ್ನೂ ಓದಿ:Bigg Boss:’ಕಳ್ಳನಿಗೊಂದು ಪಿಳ್ಳೆ ನೆಪ’ ಅಂತ ಸಂಗೀತಾಗೆ ಟಾಂಗ್‌ ಕೊಟ್ಟ ನೀತು

ಅಂದಹಾಗೆ, ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡೀಗೌಡರ 10ನೇ ಪುಣ್ಯ ಸ್ಮರಣೆ ಮಾಡಲಾಗಿದೆ. ಕರಡೀಗೌಡರ ಪ್ರತಿಷ್ಠಾನದಿಂದ 10ನೇ ವರ್ಷದ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಈ ಪ್ರಶಸ್ತಿ ಶಿವರಾಜ್‌ಕುಮಾರ್ ಅವರಿಗೆ ಸಿಕ್ಕಿದೆ. ಈ ಬಗ್ಗೆ ನಟ, ಸಂತಸ ವ್ಯಕ್ತಪಡಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್