ಎಂದಿನಂತೆ ಪ್ರಯತ್ನ ಮುಂದುವರೆಯಲಿದೆ- ಪತ್ನಿ ಸೋಲಿನ ಬಳಿಕ ಶಿವಣ್ಣ ರಿಯಾಕ್ಷನ್

By
1 Min Read

ಲೋಕಸಭಾ ಚುನಾವಣಾ ಫಲಿತಾಂಶ (Loksabha Election 2024) ಹೊರಬಿದ್ದಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪತ್ನಿ ಗೀತಾ (Geetha Shivrajkumar) ಸೋಲು ಕಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗದಲ್ಲಿ ಕಣಕ್ಕೆ ನಿಂತಿದ್ದ ಗೀತಾ ಸೋಲಾಗಿದೆ. ಈ ಬೆನ್ನಲ್ಲೇ, ನಟ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಎಂದಿನಂತೆ ಪ್ರಯತ್ನ ಮುಂದುವರೆಯಲಿದೆ ಎಂದು ಪತ್ನಿಯ ಸೋಲಿನ ಬಳಿಕ ನಟ ರಿಯಾಕ್ಟ್ ಮಾಡಿದ್ದಾರೆ.

ಧನ್ಯವಾದಗಳು.. ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ ನಿಮ್ಮೂಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತಾ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಶಿವಣ್ಣ (Shivarajkumar) ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ, ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದು ಜಯ ಸಾಧಿಸಿದರು. 2,43,715 ಮತಗಳ ಅಂತರದಲ್ಲಿ ಅವರು ವಿನ್ ಆದರು. ಗೀತಾ ಶಿವರಾಜ್‌ಕುಮಾರ್ ಅವರು 5,35,006 ಮತಗಳನ್ನು ಪಡೆದರು.  ಈ ಬಾರಿ ಗೀತಾ ಗೆಲುವಿಗಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು. ಆದರೆ, ಯಾವ ಪ್ರಚಾರವೂ ಅವರನ್ನು ಕೈ ಹಿಡಿಯಲಿಲ್ಲ.

Share This Article