ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

Public TV
1 Min Read

ತೆಲುಗು ಆಕ್ಟರ್ ಶರ್ವಾನಂದ್ (Sharwanand) ಅವರು ಜೂನ್ 3ರಂದು ರಕ್ಷಿತಾ ರೆಡ್ಡಿ (Rakshitha Reddy) ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಶರ್ವಾನಂದ್ ಮದುವೆಯಾದರು. ಇದೀಗ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಟನ ಆರತಕ್ಷತೆ ಜರುಗಿದೆ. ಈ ಸಂಭ್ರಮದಲ್ಲಿ ಸಿನಿ ತಾರೆಯರು ಭಾಗಿಯಾಗಿದ್ದಾರೆ.

ಟಾಲಿವುಡ್ (Tollywood) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟ ಶರ್ವಾನಂದ್ ಸಂಚಲನ ಮೂಡಿಸಿದ್ದಾರೆ. ಜಾನೂ, ಮಹಾಸಮುದ್ರಂ, ಓಕೆ ಓಕಾ ಜೀವಿತಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಿನ್ನ ಕಥೆ, ವಿಭಿನ್ನ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾದರು. ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

ಜೈಪುರ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದ ಶರ್ವಾನಂದ್ ಇದೀಗ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಆಪ್ತರಿಗೆ ರಿಸೆಪ್ಷನ್‌ಗೆ ಆಹ್ವಾನ ನೀಡಿದ್ದರು. ಸೆಲೆಬ್ರಿಟಿಗಳ ದಂಡೇ ನಟನ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಸೂಟ್‌ನಲ್ಲಿ ಶರ್ವಾನಂದ್ ಕಾಣಿಸಿಕೊಂಡಿದ್ದರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಶರ್ವಾನಂದ್ ರೆಸೆಪ್ಷನ್ ಸಂಭ್ರಮದಲ್ಲಿ ರಾಮ್ ಚರಣ್ (Ram Charan) ದಂಪತಿ, ಬಾಲಯ್ಯ, ನಟ ವೆಂಕಟೇಶ್, ರಾಣಾ ದಗ್ಗುಭಾಟಿ, ಲಕ್ಷ್ಮಿ ಮಂಚು, ನಿಖಿಲ್ ಸಿದ್ಧಾರ್ಥ್, ನಟಿ ರೀತು ವರ್ಮಾ ಸೇರಿದಂತೆ ಹಲವು ಭಾಗಿಯಾಗಿ, ಶುಭಕೋರಿದರು.

Share This Article