`ಛೂ ಮಂತರ್’ ಟೀಸರ್‌ ಔಟ್:‌ ಮಾರ್ಗನ್‌ ಹೌಸ್‌ ರಹಸ್ಯ ಭೇದಿಸಲು ಬಂದ ನಟ ಶರಣ್‌

Public TV
2 Min Read

`ಗುರು ಶಿಷ್ಯರು’ (Guru Shishyaru) ಸಿನಿಮಾದಲ್ಲಿ ಪಿಟಿ ಮಾಸ್ಟರ್ ಆಗಿ ಗೆದ್ದಿದ್ದ ನಟ ಶರಣ್ `ಛೂ ಮಂತರ್’ (Choo Mantar Film) ಮಾಡಲು ಬರುತ್ತಿದ್ದಾರೆ. ಶರಣ್ ಹುಟ್ಟುಹಬ್ಬದಂದು ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದ್ದಾರೆ. `ಛೂ ಮಂತರ್’ ಟೀಸರ್‌ನಿಂದ ಶರಣ್ ಸದ್ದು ಮಾಡ್ತಿದ್ದಾರೆ.

 

View this post on Instagram

 

A post shared by Tarun Talkies (@taruntalkies)

ನಟ ಶರಣ್‌ ನಗಿಸಿ, ಹೆದರಿಸೋಕೆ ಬರುತ್ತಿದ್ದಾರೆ. ನಟ ಶರಣ್ ಈಗ `ಛೂ ಮಂತರ್’ ಚಿತ್ರದ ಟೀಸರ್ ಮೂಲಕ ಕಮಾಲ್ ಮಾಡ್ತಿದ್ದಾರೆ. ಮಾನಸ ತರುಣ್, ತರುಣ್ ಶಿವಪ್ಪ ನಿರ್ಮಾಣದಲ್ಲಿ `ಛೂ ಮಂತರ್’ ಸಿನಿಮಾ ಮೂಡಿ ಬಂದಿದೆ. ಸದ್ಯ `ಛೂ ಮಂತರ್’ ಟೀಸರ್ ಹಾರರ್ ಝಲಕ್ ಪ್ರೇಕ್ಷಕರನ್ನ ಬಡಿದೆಬ್ಬಿಸಿದೆ. ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿರುವ ಶರಣ್ ಅವರ ಹೊಸ ಅವತಾರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

 

View this post on Instagram

 

A post shared by Tarun Talkies (@taruntalkies)

ಹಾಲಿವುಡ್ (Hollywood) ಸಿನಿಮಾಗಳನ್ನು ನೆನಪಿಸುವ ವಿಷ್ಯುವಲ್ಸ್ `ಛೂ ಮಂತರ್’ ಸಿನಿಮಾದಲ್ಲಿದೆ ಎನ್ನುವುದು ಟೀಸರ್ ನೋಡಿದ್ರೆ ಅರ್ಥವಾಗುತ್ತದೆ. ಪಾಳು ಬಿದ್ದ ಉತ್ತರಾಕಾಂಡದ ಮಾರ್ಗನ್ ಹೌಸ್ ಪ್ಯಾಲೇಸ್‌ನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಭೂತ ಪ್ರೇತ ಇರುವ ಆತಂಕ ಮನೆಯಲ್ಲಿರುವವರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಾಯಕನಾಗಿ ಶರಣ್ ಎಂಟ್ರಿ ಕೊಡುತ್ತಾರೆ. ಟೀಸರ್ ನೋಡುಗರನ್ನು ಕಥೆಯ ಒಳಗೆ ಕರೆದುಕೊಂಡು ಹೋಗುತ್ತದೆ.

ನಟ ಶರಣ್ ಈ ಸಿನಿಮಾದಲ್ಲಿ ಒಬ್ಬ ಮಂತ್ರವಾದಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್, ಅದಿತಿ, ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. `ಕರ್ವ’ (Karva) ಖ್ಯಾತಿಯ ನವನೀತ್ (Navaneeth) `ಛೂ ಮಂತರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ.

ಸದ್ಯ ಸಿನಿಮಾದ ಪೋಸ್ಟರ್, ಟೀಸರ್ ಮೂಲಕ `ಛೂ ಮಂತರ್’ ಚಿತ್ರ ಸಂಚಲನ ಸೃಷ್ಟಿಸಿದೆ. ಸಿನಿಮಾ ಚಿತ್ರೀಕರಣ ಕೂಡ ಕಂಪ್ಲಿಟ್ ಆಗಿದ್ದು, ಸದ್ಯದಲ್ಲಿಯೇ ತೆರೆಯ ಮೇಲೆ ಅಬ್ಬರಿಸಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *