ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

Public TV
2 Min Read

ಬೆಂಗಳೂರು: ಸಮಯ ಪರಿಪಾಲನೆ ಮಾಡೋದಕ್ಕೆ ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಮಾರು 8 ವರ್ಷಗಳ ಹಿಂದೆ ನಾನು ಟೈಮ್ ಗೆ ಅಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಆದ್ರೆ ಒಂದು ಬಾರಿ ರವಿಚಂದ್ರನ್ ಅವರು ಶಂಕರ್ ನಾಗ್ ಅವರ ಬಗ್ಗೆ ಹೇಳಿದ ಬಳಿ ನಾನು ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇನೆ ಅಂತ ಹೇಳಿದ್ರು.

ರವಿಚಂದ್ರನ್ ಏನ್ ಹೇಳಿದ್ದರು?:
ಒಂದು ಸಾರಿ ರವಿಚಂದ್ರನ್ ಸಂದರ್ಶನವೊಂದರಲ್ಲಿ, ಸ್ಯಾಂಡಲ್‍ವುಡ್ ನಲ್ಲಿ ತಾನು 24 ಗಂಟೆ ಹೀಗೆ ಇರಬೇಕು ಎಂಬುದನ್ನು ನಿಗದಿ ಮಾಡಿಕೊಂಡು ಪಾಲನೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಅಂದ್ರೆ ಅದು ಶಂಕರ್ ನಾಗ್ ಅಂತಾ ಹೇಳಿದ್ದರು. ಅಂದು ರವಿಚಂದ್ರನ್ ಮಾತು ಕೇಳಿದಾಗಿನಿಂದ ಸಮಯಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದೇನೆ ಅಂದ್ರು. ಇದನ್ನೂ ಓದಿ: ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

ಅಂದಿನ ಕಾಲದಲ್ಲಿ ‘ಒಂದು ಮುತ್ತಿನ ಕಥೆ’ ಸಿನಿಮಾದಲ್ಲಿ ಅಂಡರ್ ವಾಟರ್‍ನಲ್ಲಿ ಶೂಟಿಂಗ್ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಕೆಲವರು ತಡವಾಗಿ ಬಂದಾಗ ಮೊದಲಿಗೆ ಕೋಪ ಬರುತ್ತಿತ್ತು. ಒಂದು ಕ್ಷಣ ಯೋಚಿಸಿದಾಗ 8 ವರ್ಷಗಳ ಹಿಂದೆ ನಾನು ಹಾಗೆ ಇದ್ದೆ ಅನ್ನೋದು ನೆನಪಿಗೆ ಬರುತ್ತದೆ. ಹಾಗಾಗಿ ಯಾರ ಮೇಲೆಯೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಸೆಟ್ ಗೆ ತಡವಾಗಿ ಬರೋದು ಇದ್ದಿದ್ರೆ ಮೊದಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿರುತ್ತೇನೆ ಅಂತ ಹೇಳಿದ್ರು.

ಅಂದಿನ ಕಾಲದಲ್ಲಿ ರಾಜ್‍ಕುಮಾರ್, ಶಂಕರ್ ನಾಗ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಎಲ್ಲರೂ ನನ್ನ ಫೇವರೇಟ್. ಅವರಲ್ಲಿ ಯಾರು ಇಷ್ಟ ಹೇಳೋದಕ್ಕೆ ಆಗಲ್ಲ. ಅಂದಿನ ಕಾಲದ ನಟರಲ್ಲಿ ಇವರಿಷ್ಟ, ಇವರು ಅಲ್ಲ ಅಂತಾ ಡಿವೈಡ್ ಮಾಡೋದಕ್ಕೆ ಸಾಧ್ಯನೇ ಇಲ್ಲ ಅಂತ ಅವರು ಅಂದ್ರು.

ಇದೇ ವೇಳೆ ನಿಮಗೆ ಇಷ್ಟವಾದ ತಿನಿಸುಗಳು ಯಾವುದು ಅಂತ ಕೇಳಿದಾಗ ಪ್ಲೇನ್ ಆ್ಯಪಲ್ ಹಾಗೂ ಕೇಕ್ ಇಷ್ಟ. ಇನ್ನು ಪಿಂಕ್, ನೀಲಿ ಬಣ್ಣಗಳನ್ನು ತುಂಬಾನೇ ಇಷ್ಟ ಪಡುತ್ತೇನೆ ಅಂತ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=tjMufAL6i9U

Share This Article
Leave a Comment

Leave a Reply

Your email address will not be published. Required fields are marked *