ಹುಚ್ಚರಂತೆ ಯಾಕೆ ಕೂಗುತ್ತಿದ್ದೀರಾ? ಪಾಪರಾಜಿಗಳಿಗೆ ಶಾಹಿದ್ ಕಪೂರ್ ಕ್ಲಾಸ್

Public TV
1 Min Read

ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಈಗ ಸಿನಿಮಾ ವಿಚಾರದ ಬದಲಾಗಿ ಕಿರಿಕ್ ಸುದ್ದಿ ಮೂಲಕ ಸದ್ದು ಮಾಡ್ತಿದ್ದಾರೆ. ಕಾರ್ಯಕ್ರಮವೊಂದಕ್ಕೆ ಪತ್ನಿ ಮೀರಾ (Meera) ಜೊತೆ ಶಾಹಿದ್ ಆಗಮಿಸುತ್ತಿದ್ದ ವೇಳೆ ಪಾಪರಾಜಿಗಳ ವರ್ತನೆಗೆ ನಟ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಶಾಹಿದ್ ಕಪೂರ್ (Shahid Kapoor) ಸ್ಟಾರ್‌ಡಮ್ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಬಹಳಷ್ಟು ಪಾಪರಾಜಿಗಳು ಯಾವಾಗಲೂ ಅವರ ಹಿಂದೆ ಇರುತ್ತಾರೆ. ನಿನ್ನೆ (ಸೆ.2) ಕೂಡ ಶಾಹಿದ್ ಕಪೂರ್ ಅವರು ಪೋಸ್ ನೋಡುವಂತೆ ಅನೇಕ ಪಾಪರಾಜಿಗಳು ಹೆಸರಿಡಿದು ಕೂಗಿದ್ದಾರೆ. ಇದಕ್ಕೆ ಅಲ್ಲೇ ನಿಂತಿದ್ದ ನಟ ಕೋಪಗೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

 

View this post on Instagram

 

A post shared by Varinder Chawla (@varindertchawla)

ತಮ್ಮ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ಶಾಹಿದ್ ಹೊರಗೆ ಹೋಗಿದ್ದರು. ಈ ವೇಳೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನೀವು ಯಾಕೆ ಕೂಗುತ್ತಿದ್ದೀರಿ? ನಾನು ಇಲ್ಲಿಯೇ ಇದ್ದೇನೆ. ನೀವು ಹುಚ್ಚನಂತೆ ಏಕೆ ಕೂಗುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದರು. ನಾನು ನನ್ನ ಕಾರಿನಲ್ಲಿ ಇಲ್ಲಿಂದ ತೆರಳಿದ ನಂತರ ನೀವು ಕೂಗಬಹುದು. ಅದರಲ್ಲಿ ಅರ್ಥವಿದೆ. ನಾನು ಇಲ್ಲಿಯೇ ಇದ್ದರೂ ಯಾಕೆ ಹಿಂಗೆ ಕೂಗುತ್ತಿದ್ದಿರಿ? ಎಂದು ತುಂಬಾ ಕೋಪದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅವರ ಜೊತೆಗೆ ಅವರ ತಾಯಿ ಮತ್ತು ಪತ್ನಿ ಇದ್ದರು.

ಶಾಹಿದ್ ಕಪೂರ್ ‘ಡಬಲ್ ಟ್ರಬಲ್’ (Double Trouble) ಎಂಬ ಸಿನಿಮಾದಲ್ಲಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಈ ಚಿತ್ರದಿಂದ ಅವರು ಹೊರಬಂದಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ(Rashmika Mandanna) ನಾಯಕಿಯಾಗಿದ್ದರು. ಸದ್ಯ ನಟ, ಕೋಯಿ ಶಕ್ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕರೀನಾ ಕಪೂರ್ (Kareena Kapoor) ಜೊತೆಗಿನ ಹೊಸ ಸಿನಿಮಾಗೆ ಶಾಹಿದ್ ಓಕೆ ಎಂದಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್