ಪತ್ನಿ ಫೋಟೋ ಕ್ಲಿಕ್ಕಿಸಲು ಬಂದವರಿಗೆ ಶಾಹಿದ್ ಕಪೂರ್ ವಾರ್ನಿಂಗ್

By
1 Min Read

ಬಾಲಿವುಡ್ (Bollywood) ನಟ ಶಾಹಿದ್ ಕಪೂರ್ (Shahid Kapoor) ಪಕ್ಕಾ ಫ್ಯಾಮಿಲಿ ಮ್ಯಾನ್. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಇದೀಗ ಪತ್ನಿ ಮೀರಾ (Mira) ಜೊತೆ ಹೋಟೆಲ್‌ವೊಂದಕ್ಕೆ ನಟ ಭೇಟಿ ನೀಡಿದ್ದರು. ಈ ವೇಳೆ, ಪತ್ನಿ ಫೋಟೋ ತೆಗೆಯಲು ಬಂದವರಿಗೆ ಶಾಹಿದ್ ಕಿಡಿಕಾರಿದ್ದಾರೆ.

ಬಿಡುವಿನ ವೇಳೆ, ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಪತ್ನಿ ಜೊತೆ ಶಾಹಿದ್ ಊಟ ಸವಿದಿದ್ದಾರೆ. ಬಳಿಕ ಹೋಟೆಲ್‌ನಿಂದ ಹೊರಬರುವಾಗ ಪಾಪರಾಜಿಗಳು ಫೋಟೋಗಾಗಿ ಮುಗಿಬಿದ್ದಿದ್ದಾರೆ. ಇದು ನಟನಿಗೆ ಕಿರಿಕಿರಿ ಆಗಿದೆ. ಬಳಿಕ ಪತ್ನಿ ಫೋಟೋ ತೆಗೆಯಲು ಬಂದಿದ್ದು ನಟನಿಗೆ ಕೋಪ ತರಿಸಿದೆ. ನೀವು ಇದನ್ನು ನಿಲ್ಲಿಸುತ್ತೀರಾ ಎಂದು ನಟ ಕೂಗಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹಾಕುತ್ತಿದ್ದಾರೆ. ನಟನಿಗೆ ಸಕ್ಸಸ್ ತಲೆಗೆ ಏರಿದೆ ಎಂದೆಲ್ಲಾ ನೆಟ್ಟಿಗರು ಕುಟುಕಿದ್ದಾರೆ.

ಅಂದಹಾಗೆ, ಕೃತಿ ಸನೋನ್ (Kriti Sanon) ಜೊತೆಗಿನ ‘ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ’ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶಾಹಿದ್ ನಟನೆ ಮತ್ತು ಚಿತ್ರಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರದ ಬಳಿಕ ಪೂಜಾ ಹೆಗ್ಡೆ ಜೊತೆ ‘ದೇವ’ ಸಿನಿಮಾ (Deva Film) ಮಾಡಿ ಮುಗಿಸಿದ್ದಾರೆ.

ಕನ್ನಡದ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕ ಸಚಿನ್ ಬಿ ರವಿ ಜೊತೆ ಸಿನಿಮಾ ಮಾಡಲು ಶಾಹಿದ್ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದ್ದಾರೆ.

Share This Article