ಶಾರುಖ್ ಖಾನ್ ಕಿರಿಯ ಪುತ್ರ ಚಿತ್ರರಂಗಕ್ಕೆ ಎಂಟ್ರಿ

Public TV
1 Min Read

ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಬಳಿಕ ಕಿರಿಯ ಪುತ್ರ ಅಬ್ರಾಮ್ ಖಾನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ‘ಮುಫಾಸಾ: ದಿ ಲಯನ್ ಕಿಂಗ್’ ಎಂಬ ಸಿನಿಮಾ ಮೂಲಕ ಅಬ್ರಾಮ್ (Abram Khan) ಪಾದಾರ್ಪಣೆ ಮಾಡುತ್ತಿದ್ದಾರೆ.

1994ರಲ್ಲಿ ಬಿಡುಗಡೆಯಾದ ಕ್ಲಾಸಿಕ್ ಅನಿಮೇಷನ್ ಚಿತ್ರ ‘ದಿ ಲಯನ್ ಕಿಂಗ್’ ಸಿನಿಮಾದ ಪ್ರಿಕ್ವೇಲ್ ಬರುತ್ತಿದೆ. ಅದಕ್ಕೆ ‘ಮುಫಾಸಾ: ದಿ ಲಯನ್ ಕಿಂಗ್’ (Mufasa: The Lion King) ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಮುಫಾಸಾಗೆ ಶಾರುಖ್ ಖಾನ್ ಧ್ವನಿ ನೀಡಲಿದ್ದಾರೆ. ಸಿಂಬಾ ಪಾತ್ರಕ್ಕೆ ಆರ್ಯನ್ ಖಾನ್ ಮತ್ತು ಯಂಗ್ ಮುಫಾಸಾಗೆ ಅಬ್ರಾಮ್ ಖಾನ್ ಧ್ವನಿ ನೀಡಲಿದ್ದಾರೆ. ಈ ಮೂಲಕ ಅಬ್ರಾಮ್‌ ಬಿಟೌನ್‌ಗೆ ಎಂಟ್ರಿ ಕೊಡಲಿದ್ದಾರೆ.

ಇನ್ನೂ ‘ಮುಫಾಸಾ: ದಿ ಲಯನ್ ಕಿಂಗ್’ ಬಹುಭಾಷೆಗಳಲ್ಲಿ ಡಿಸೆಂಬರ್‌ 20ರಂದು ಒಟಿಟಿಯಲ್ಲಿ ತೆರೆಕಾಣಲಿದೆ. ಈ ಮೂವರ ವಾಯ್ಸ್‌ ಕೇಳಲು ಡಿ.20ರವರೆಗೆ ಕಾದುನೋಡಬೇಕಿದೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಅಂದಹಾಗೆ, ಶಾರುಖ್ ಖಾನ್ ಸದ್ಯ ‘ಕಿಂಗ್’ (King) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಸುಹಾನಾಳನ್ನು ಗ್ರ್ಯಾಂಡ್ ಆಗಿ ಲಾಂಚ್ ಮಾಡಲು ಉತ್ತಮ ಕಥೆಯನ್ನೇ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅದ್ಭುತ ವ್ಯಕ್ತಿ ಎಂದು ಹೊಗಳಿದ ವಿಕ್ಕಿ ಕೌಶಲ್

ಮಗಳ ಸಿನಿಮಾಗೆ ಶಾರುಖ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅಪ್ಪ ಮತ್ತು ಮಗಳು ಇಬ್ಬರೂ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸುಜಯ್ ಘೋಷ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

Share This Article