ರಾಕಿಭಾಯ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಧಮ್ಕಿ

Public TV
1 Min Read

ಬಾಲಿವುಡ್ ಸ್ಟಾರ್ (Bollywood) ಸಲ್ಮಾನ್ ಖಾನ್‌ಗೆ (Salman Khan) ಆಗಾಗ ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಈ ಹಿಂದೆ ವಿದೇಶದಿಂದ ಬೆದರಿಕೆ ಕಾಲ್ ಬಂದಿತ್ತು. ಇದೀಗ ಭಾರತದ ಲೊಕೇಶನ್‌ಗಳಿಂದ ಬೆದರಿಕೆಯ ಕರೆ ಬರುತ್ತಿರೋದು ಆತಂಕ ಮೂಡಿಸಿದೆ. ಇದೀಗ ಮತ್ತೆ ಸಲ್ಲುಗೆ ಕರೆ ಮಾಡಿ, ಕೊಲೆ ಮಾಡೋದಾಗಿ ಕಿಡಿಗೇಡಿಯೊಬ್ಬ ಧಮ್ಕಿ ಹಾಕಿದ್ದಾರೆ.

ಭಾಯಿಜಾನ್ ಸಲ್ಮಾನ್‌ಗೆ ರಾಕಿ ಭಾಯ್ ಹೆಸರಿನಿಂದ ಬೆದರಿಕೆ ಕರೆ ಬಂದಿದೆ. ನೀವು ಅಂದುಕೊಂಡ ರಾಕಿ ಭಾಯ್ ಅಲ್ಲ. ಏ.30ರಂದು ಝೋಧಪುರ ಸ್ಥಳದಿಂದ ಕರೆ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಖಡಕ್ ಆಗಿ ಮಾತನಾಡಿದ್ದಾರೆ. ಝೋಧಪುರದ ಈ ವ್ಯಕ್ತಿ ಗೋ ರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಅಕ್ಕನ ಜೊತೆ ಮೈಸೂರು ಅರಮನೆ ಸುತ್ತಾಡಿದ ಶುಭಾ ಪೂಂಜಾ

ಸಲ್ಮಾನ್ ಬೆದರಿಕೆ ಕರೆ ಹೆಚ್ಚಾಗುತ್ತಿದ್ದಂತೆ, ಬಿಳಿ ಬುಲೆಟ್ ಪ್ರೂಫ್‌ ನಿಸ್ಸಾನ್ ಎಸ್‌ಯುವಿ ಕಾರ್‌ ಖರೀದಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿ, ಭದ್ರತೆ ಕೂಡ ಹೆಚ್ಚಾಗಿದೆ.

ಸದ್ಯ ಸಲ್ಮಾನ್ ಖಾನ್ ಅವರು Kisi Ka Bhai Kisi Ka Jaan ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಏ.21ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮೊದಲ ಬಾರಿಗೆ ಪೂಜಾ ಹೆಗ್ಡೆ- ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿದ್ದಾರೆ.

Share This Article