ಕಾಲಿವುಡ್ ಸ್ಟಾರ್ ಕಾಮಿಡಿಯನ್‌ಗೆ ಸಾಧು ಕೋಕಿಲ ಪುತ್ರ ಆ್ಯಕ್ಷನ್ ಕಟ್

By
2 Min Read

ಸ್ಯಾಂಡಲ್‌ವುಡ್ ಸ್ಟಾರ್ ಕಾಮಿಡಿಯನ್ ಸಾಧು ಕೋಕಿಲ (Sadhukokila) ಪುತ್ರ ಸುರಾಗ್ (Suraag) ಅವರು ನಿರ್ದೇಶಕನಾಗಿ ಗುರುತಿಸಿಕೊಳ್ಳಲು ಮೊದಲ ಹೆಜ್ಜೆ ಇಡ್ತಿದ್ದಾರೆ. ತಮಿಳಿನತ್ತ ಯುವ ನಿರ್ದೇಶಕ ಸುರಾಗ್ ಮುಖ ಮಾಡಿದ್ದಾರೆ. ತಮಿಳಿನ ಸ್ಟಾರ್ ಕಾಮಿಡಿಯನ್ ಯೋಗಿ ಬಾಬುಗೆ (Yogi Babu) ಸಾಧು ಪುತ್ರ ಸುರಾಗ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ನಟ ಸಾಧು ಕೋಕಿಲ ಅವರದ್ದು ಕಲಾವಿದರ ಕುಟುಂಬವಾಗಿದ್ದು, ಸಾಕಷ್ಟು ವರ್ಷಗಳಿಂದ ಕಲಾದೇವಿಯ ಸೇವೆ ಮಾಡ್ತಿದ್ದಾರೆ. ಸಾಧು ಕೋಕಿಲ ಅವರ ಕಾಮಿಡಿ ಟೈಮಿಂಗ್ ಇಡೀ ಕರ್ನಾಟಕವೇ ತಲೆಬಾಗಿದೆ. ಕಾಮಿಡಿ ಪಾತ್ರಗಳಿಗೆ ಸೀಮಿತವಾಗದೇ ಬೇರೆ ಬೇರೆ ಪಾತ್ರಗಳು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಂಗೀತ ಕ್ಷೇತ್ರದಲ್ಲೂ ಸಾಧು ಸಾಧನೆ ಮಾಡಿದ್ದಾರೆ. ಈಗ ಪುತ್ರ ಸುರಾಗ್ ಕೂಡ ನಿರ್ದೇಶನ ರಂಗದಲ್ಲಿ ಸಾಧನೆ ಮಾಡಲು ಹೆಜ್ಜೆ ಇಡ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕೆ ಅನುಭವಿ ನಟನಿಗೆ ಡೈರೆಕ್ಷನ್ ಮಾಡುವ ಅವಕಾಶ ಸುರಾಗ್‌ಗೆ ಸಿಕ್ಕಿದೆ. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್

ಸುರಾಗ್- ಯೋಗಿ ಬಾಬು ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 2ನೇ ಹಂತದ ಶೂಟಿಂಗ್ ಶೀಘ್ರದಲ್ಲೇ ಆರಂಭ ಆಗಲಿದೆ. ಸಾಧು ಕೋಕಿಲ ಅವರ ಲೂಪ್ ಎಂಟರ್‌ಟೇನ್ಮೆಂಟ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಾಧು ಕೋಕಿಲ ಅವರೇ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರೋದು ವಿಶೇಷ.

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಸುರಾಗ್ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಉಪ್ಪಿ 2 ಸಿನಿಮಾಗೆ ಸಹ-ನಿರ್ದೇಶಕನಾಗಿ ಅವರು ಕೆಲಸ ಮಾಡಿ ಅನುಭವ ಹೊಂದಿದ್ದರು. ಈಗ ಯೋಗಿ ಬಾಬು ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಕೌತುಕ ಮೂಡಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ತಮಿಳಿನ ಜೊತೆಗೆ ಬೇರೆ ಭಾಷೆಗಳಿಗೂ ಈ ಚಿತ್ರ ಡಬ್ ಆಗಲಿದೆ. ಕನ್ನಡದ ಹಿರಿಯ ನಟಿ ಉಮಾಶ್ರೀ, ಅವಿನಾಶ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್