ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

Public TV
2 Min Read

ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ (Junior NTR) ಜಂಟಿಯ ಇನ್ನೂ ಹೆಸರಿಡದ ಚಿತ್ರ ಭಾರೀ ಸೌಂಡ್ ಮಾಡುತ್ತಿದೆ. ಕರ್ನಾಟಕದ ಕರಾವಳಿಯ ಭಾಗದ ಕುಂದಾಪುರದಲ್ಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯಕ್ಕೀಗ ಈ ಬಿಗ್ ಪ್ರಾಜೆಕ್ಟ್‌ಗೆ ʻಎನ್‌ಟಿಆರ್ 31ʼ ಎಂದು ಹೆಸರಿಡಲಾಗಿದೆ.

 

View this post on Instagram

 

A post shared by Rukmini Vasanth (@rukmini_vasanth)

ಚಿತ್ರಕ್ಕೆ ಸಂಬಂಧಿಸಿದ ಸಕಲ ಮಾಹಿತಿಯನ್ನೂ ರಹಸ್ಯವಾಗಿಡೋದು ಪ್ರಶಾಂತ್ ನೀಲ್ (Prashanth Neel) ಶೈಲಿ. ಹೀಗಾಗಿ ಎಂದಿನಂತೆ ನೀಲ್ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಚಿತ್ರದ ನಾಯಕಿ ಕುರಿತು ಹಲವು ಹೆಸರುಗಳು ಚಾಲ್ತಿಯಲ್ಲಿತ್ತು. ಆ ಪಟ್ಟಿಯಲ್ಲಿ ರುಕ್ಮಿಣಿ ವಸಂತ್ ಹೆಸರೂ ಇತ್ತು. ಇದೀಗ ನಟಿ ರುಕ್ಮಿಣಿ ವಸಂತ್ (Rukhmini Vasanth) ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಒಂದು ಸೆಲ್ಫಿ ಚಿತ್ರದ ನಾಯಕಿಯ ಅನುಮಾನಕ್ಕೆ ಪುಷ್ಠಿ ಕೊಡುವಂತಿದೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

ರುಕ್ಮಿಣಿ ವಸಂತ್ ಇದೀಗ ವೈಟ್ ಶರ್ಟ್ ಮೇಲೆ ಟೈಗರ್ ಪ್ರಿಂಟ್ ಇರುವ ಉಡುಗೆ ಧರಿಸಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ʻಟೈಗರ್ ಟೈಗರ್ ಬರ್ನಿಂಗ್ ಬ್ರೈಟ್ʼ ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಹೀಗಾಗಿ ಈ ಸೆಲ್ಫಿಗೆ ʻಎನ್‌ಟಿಆರ್ 31ʼ (NTR 31) ಚಿತ್ರಕ್ಕೆ ರುಕ್ಮಿಣಿಯೇ ನಾಯಕಿ ಎಂಬ ವದಂತಿಯನ್ನ ತಾಳೆ ಹಾಕಲಾಗುತ್ತಿದೆ. ಕಾರಣ ಜೂ.ಎನ್‌ಟಿಆರ್‌ಗೆ ʻಯಂಗ್ ಟೈಗರ್ʼ ಎಂಬ ಬಿರುದಿದೆ. ಹೀಗಾಗೇ ಟೈಗರ್ ಪ್ರಿಂಟ್‌ವುಳ್ಳ ಉಡುಗೆಯಲ್ಲಿ ರುಕ್ಮಿಣಿ ಪೋಸ್ ಕೊಟ್ಟಿರಬಹುದೇ ಎಂದು ಊಹಿಸುತ್ತಿದ್ದಾರೆ ಅವರ ಫಾಲೋವರ್ಸ್. ಈ ಕುರಿತು ಅವರ ಪೋಸ್ಟ್‌ಗೆ ಕಾಮೆಂಟ್ಸ್‌ಗಳೂ ಕೂಡ ಬರುತ್ತಿದೆ. ಇದನ್ನೂ ಓದಿ: ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

ಪ್ರತಿ ಸಿನಿಮಾದಲ್ಲೂ ಪ್ರಶಾಂತ್ ನೀಲ್ ಹಂತ ಹಂತವಾಗೇ ಕಲಾವಿದರ ಹಾಗೂ ಇನ್ನಿತರ ಮಾಹಿತಿಯನ್ನ ರಿವೀಲ್ ಮಾಡ್ತಾರೆ. ಅದರಂತೆ ಜೂ.ಎನ್‌ಟಿಆರ್ ಚಿತ್ರಕ್ಕೂ ಪ್ರಶಾಂತ್ ನೀಲ್ ಇದುವರೆಗೂ ಶೀರ್ಷಿಕೆಯನ್ನೂ ಘೋಷಿಸಿಲ್ಲ. ಡ್ರ್ಯಾಗನ್‌ ಸೇರಿದಂತೆ ಕೆಲವು ಶೀರ್ಷಿಕೆ ಗುಲ್ಲಾಗಿದೆ. ಆದರೆ ಯಾವುದೂ ಅಧಿಕೃತ ಘೋಷಣೆಯಾಗಿಲ್ಲ. ಇನ್ನು ನಾಯಕಿಯ ಆಯ್ಕೆ ನಡೆದಿದೆ ಎನ್ನಲಾಗಿದ್ದು ಯಾರು ಅನ್ನೋದನ್ನ ಸಿನಿಮಾ ಟೀಮ್ ಇಂದಿಗೂ ರಿವೀಲ್ ಮಾಡಿಲ್ಲ. ಇದೀಗ ರುಕ್ಮಿಣಿ ವಸಂತ್ ಹಾಕಿರುವ ಪೋಸ್ಟ್‌ನಿಂದಾಗಿ ಎನ್‌ಟಿಆರ್31 ಚಿತ್ರಕ್ಕೆ ರುಕ್ಮಿಣಿ ನಾಯಕಿ ಅನ್ನೋ ವದಂತಿಗೆ ಜೀವ ಬಂದಿದೆ. ಇದನ್ನೂ ಓದಿ: ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್

Share This Article