ತಮಿಳು ನಟ ಕಾರ್ತಿ ನಟನೆಯ ‘ಜಪಾನ್’ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್

Public TV
2 Min Read

‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಸಿನಿಮಾದ ಸಕ್ಸಸ್ ನಂತರ ನಟ ಕಾರ್ತಿ ಅವರು ಇದೀಗ ‘ಜಪಾನ್’ ಸಿನಿಮಾ ಮೂಲಕ ಬರುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಕಾರ್ತಿ ಚಿತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ.

ಕಾಲಿವುಡ್ ನಟ ಕಾರ್ತಿ (Actor Karthi) ಅವರು ‘ಪೊನ್ನಿಯನ್ ಸೆಲ್ವನ್’ ಪಾರ್ಟ್ 1 ಮತ್ತು ಪಾರ್ಟ್ 2 ಸಕ್ಸಸ್ ಖುಷಿಯಲ್ಲಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ನಟ ಕಾರ್ತಿ, ಜಪಾನ್ ಮೇಡ್ ಇನ್ ಚೀನಾ ಅಂತಿದ್ದಾರೆ.

ಕಾರ್ತಿ ನಟನೆಯ ಜಪಾನ್ ಚಿತ್ರದ ಲುಕ್, ಟೀಸರ್ ಹೊರಬಿದ್ದಿದೆ. ಕಾರ್ತಿ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಆಗಿರುತ್ತೆ. ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರ್ತಿ ಮೇಲೆ ಸಿನಿಪ್ರಿಯ ನಿರೀಕ್ಷೆನೂ ಅಷ್ಟೇ ಸಹಜ. ಕಾರ್ತಿ ನಟನೆಯ 25ನೇ ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದರಿಂದ ‘ಜಪಾನ್’ಗೆ ಕನ್ನಡದ ನಟ ರಿಷಬ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ:ಭಾರತದ ಮಣ್ಣಿಗೆ ಘನತೆಯಿದೆ- G20 ಸಭೆಯಲ್ಲಿ ರಾಮ್ ಚರಣ್‌ ಮಾತು

‘ಜಪಾನ್’ (Japan) ಸಿನಿಮಾ ಕಾರ್ತಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಹೀರೊ, ಮತ್ತೊಮ್ಮೆ ಕಾಮಿಡಿಯನ್, ಮಗದೊಮ್ಮೆ ವಿಲನ್ ಆಗಿ ಕಂಡಿದ್ದಾರೆ. ಸ್ಟೈಲಿಶ್ ಲುಕ್.. ಗುಂಗುರು ಕೂದಲಿನಲ್ಲಿ ಎಂಟ್ರಿ ಕೊಟ್ಟಿರೋ ಕಾರ್ತಿ ಹೆಸರು ಈ ಸಿನಿಮಾದಲ್ಲಿ ‘ಜಪಾನ್’ ಆದರೆ, ಮೇಡ್ ಇನ್ ಇಂಡಿಯಾ. ಹೀಗಾಗಿಯೇ ಸಿನಿಮಾ ಟೀಸರ್ ಕಿಕ್ ಕೊಡುತ್ತಿದೆ. ಈ ಚಿತ್ರದ ಟೀಸರ್ ರಿಷಬ್ ಶೆಟ್ಟಿ ರಿಲೀಸ್ ಮಾಡಿ, ಕಾರ್ತಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಸದ್ಯ ಪ್ಯಾನ್‌ ಇಂಡಿಯಾ ಚಿತ್ರ ಜಪಾನ್‌ ಟೀಸರ್‌ ವ್ಯಾಪಕ ಮೆಚ್ಚಿಗೆ ವ್ಯಕ್ತವಾಗಿದೆ.

Share This Article