ರಿಷಬ್ ಶೆಟ್ಟಿ ಫ್ಯಾಮಿಲಿ ಟೈಮ್- ಪತ್ನಿ ಜೊತೆ ಬೋಟಿಂಗ್ ಮಾಡಿದ ನಟ

Public TV
1 Min Read

‘ಕಾಂತಾರ ಪ್ರೀಕ್ವೆಲ್’ (Kantara Chapter 1) ಚಿತ್ರೀಕರಣದ ನಡುವೆ ನಟ ರಿಷಬ್ ಶೆಟ್ಟಿ (Rishab Shetty) ಫ್ಯಾಮಿಲಿಗೂ ಟೈಮ್ ಕೊಡುತ್ತಿದ್ದಾರೆ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ ಈ ನಡುವೆ ರಿಲ್ಯಾಕ್ಸ್ ಕೂಡ ಮಾಡುತ್ತಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಮತ್ತು ಇಬ್ಬರು ಮಕ್ಕಳ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಾರೆ. ಇದೀಗ ಪತ್ನಿ ಜೊತೆ ರಿಷಬ್ ಬೋಟಿಂಗ್‌ಗೆ ತೆರಳಿರುವ ಫೋಟೋ ಮತ್ತು ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮ ಸಮೀಪದ ಹೊಳೆಯಲ್ಲಿ ರಿಷಬ್ ದಂಪತಿ ಬೋಟಿಂಗ್ ಮಾಡಿದ್ದಾರೆ. ಮಳೆಗಾಲದ ನಂತರ ಮ್ಯಾಂಗ್ರೋಸ್ ಕಾಡಿನ ನಡುವೆ ಹಿನ್ನೀರಿನಲ್ಲಿ ಕಯಾ ಕಿಂಗ್ ಬೋಟಿಂಗ್ ಆರಂಭವಾಗಿದ್ದು, ಮತ್ತೆ ಪ್ರವಾಸಿಗರು ಇತ್ತ ಬರಲು ಶುರು ಮಾಡಿದ್ದಾರೆ. ಇದನ್ನೂ ಓದಿ:ಆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿಲ್ಲ: ಸಿಮ್ರಾನ್ ಫುಲ್ ಗರಂ..!

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಸದ್ಯ ‘ಕಾಂತಾರ ಪಾರ್ಟ್ 1’ ಮತ್ತು ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇನ್ನೂ ‘ಕಾಂತಾರ ಪ್ರೀಕ್ವೆಲ್‌’ನಲ್ಲಿ ರಿಷಬ್ ಅವತಾರ ಮತ್ತು ನಟನೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

Share This Article