ಲೋಕಸಭಾ ಅಖಾಡದಲ್ಲಿ ನಟ ರವಿಚಂದ್ರನ್ ಹಿರೋಯಿನ್

Public TV
1 Min Read

ದೇಶಾದ್ಯಂತ ಲೋಕಸಭಾ ಚುನಾವಣೆಯ (Lok Sabha Elections) ಕಾವು ರಂಗೇರುತ್ತಿದೆ. ಯಾರೆಲ್ಲ ಅಭ್ಯರ್ಥಿ ಆಗಲಿದ್ದಾರೆ, ಯಾರಿಗೆಲ್ಲ ಟಿಕೆಟ್ ಸಿಗಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಸೆಲೆಬ್ರಿಟಿಗಳು ಕೂಡ ಈ ಬಾರಿ ಲೋಕಸಭೆಯ ಕಣದಲ್ಲಿ ಇರಲಿದ್ದಾರೆ ಎನ್ನುವ ಮಾತೂ ಜೋರಾಗಿದೆ. ಈ ಮಾತಿನ ಹಿನ್ನೆಲೆಯಲ್ಲಿ ಬಂಗಾಳಿ ನಟಿ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ್ದ ರಚನಾ ಬ್ಯಾನರ್ಜಿ  ಲೋಕಸಭಾ ಚುನಾವಣಾ ಕಣದಲ್ಲಿ ಇರಲಿದ್ದಾರೆ.

ರವಿಚಂದ್ರನ್ ನಟನೆಯ ಉಸಿರೆ, ಪ್ರೀತ್ಸು ತಪ್ಪೇನಿಲ್ಲ ಸಿನಿಮಾಗಳಲ್ಲಿ ರಚನಾ (Rachana Banerjee) ನಾಯಕಿಯಾಗಿ ನಟಿಸಿದ್ದರು. ಜೊತೆಗೆ ದಕ್ಷಿಣದ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮೂಲತಃ ಬಂಗಾಳಿ (West Bengal) ಬೆಡಗಿ ಆಗಿರುವ ರಚನಾ, ಆ ಸಿನಿಮಾ ರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ಮತ್ತು ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ.

ಇತ್ತೀಚೆಗಷ್ಟೇ ರಚನಾ ಅವರು ಮಮತಾ ಬ್ಯಾನರ್ಜಿ (Mamata  Banerjee) ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಈ ಪಕ್ಷದಿಂದಲೇ ಅವರು ಹೂಗ್ಲಿ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಟಿಕೆಟ್ ಘೋಷಣೆ ಆಗದೇ ಇದ್ದರೂ, ಟಿಕೆಟ್ ಪಕ್ಕಾ ಎಂದೇ ಹೇಳಲಾಗುತ್ತಿದೆ.

 

ಬಾಲಿವುಡ್ ನ ಕಂಗನಾ ರಣಾವತ್ ಸೇರಿದಂತೆ ದೇಶದಾದ್ಯಂತ ಸಾಕಷ್ಟು ಸಿನಿಮಾ ಕಲಾವಿದರ ಹೆಸರು ಚುನಾವಣೆ ಕಣದಲ್ಲಿ ಕೇಳಿ ಬರುತ್ತಿವೆ. ಯಾರಿಗೆಲ್ಲ ಟಿಕೆಟ್ ಸಿಗತ್ತೆ? ಯಾರೆಲ್ಲ ಚುನಾವಣೆಗೆ ನಿಲ್ಲಲ್ಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Share This Article