ನಟ ರವಿ ಕಿಶನ್ ನನ್ನ ತಂದೆ, ಡಿಎನ್ಎ ಚೆಕ್ ಮಾಡಿ ಎಂದು ನಟಿ ಸಲ್ಲಿಸಿದ್ದ ಅರ್ಜಿ ವಜಾ

Public TV
1 Min Read

ಭೋಜಪುರಿ ಖ್ಯಾತನಟ, ಹಾಗೂ ಬಿಜೆಪಿ ಮುಖಂಡ ರವಿ ಕಿಶನ್ (Ravi Kishan) ವಿರುದ್ಧ ಕೆಲವು ದಿನಗಳಿಂದ ತಾಯಿ-ಮಗಳು ನಿರಂತರ ಆರೋಪ ಮಾಡುತ್ತಿದ್ದಾರೆ. ನಟಿ ಶಿನೋವಾ ಮತ್ತು ಅವರ ತಾಯಿ ಇಬ್ಬರೂ ರವಿ ಕಿಶನ್ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದಾರೆ. ನನಗೆ ಮಗಳನ್ನು ಕೊಟ್ಟು ರವಿ ಕೈ ಕೊಟ್ಟಿದ್ದಾರೆ ಎಂದು ಮೊನ್ನೆಯಷ್ಟೇ ಶಿನೋವಾ ಅಮ್ಮ ಅಪರ್ಣಾ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಭೋಜಪುರಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಶಿನೋವಾ (Shinova), ಇದೀಗ ಕೋರ್ಟ್ ಮೆಟ್ಟಿಲು ಏರಿದ್ದರು, ರವಿ ಕಿಶನ್ ನನ್ನ ತಂದೆ ಎಂದು ಸಾಬೀತು ಪಡಿಸೋದಕ್ಕಾಗಿ ಡಿಎನ್ಎ (DNA) ಪರೀಕ್ಷೆಗೂ ಸಿದ್ಧ ಎಂದಿದ್ದರು. ಡಿಎನ್ಎ ಚೆಕ್ ಮಾಡಿಸೋಕಾಗಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿಯನ್ನೂ ಅವರು ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.

 

ಈ ಎಲ್ಲ ಆರೋಪವನ್ನೂ ರವಿ ಕಿಶನ್ ನಿರಾಕರಿಸುತ್ತಲೇ ಬಂದಿದ್ದಾರೆ. ದುಡ್ಡಿಗಾಗಿ ತಾಯಿ ಮತ್ತು ಮಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 20 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ಕಿಶನ್ ಪರ ವಕೀಲರು ಹೇಳಿದ್ದಾರೆ.

Share This Article