‘ಆರ್ಟಿಕಲ್ 370’ ಸಿನಿಮಾ ನಿರ್ದೇಶಕನ ಜೊತೆ ರಣ್‌ವೀರ್ ಸಿಂಗ್ ಹೊಸ ಸಿನಿಮಾ

Public TV
1 Min Read

ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‘ಆರ್ಟಿಕಲ್ 370’ (Article 370) ನಿರ್ದೇಶಕ ಆದಿತ್ಯಾ ಧರ್ ಜೊತೆ ಪದ್ಮಾವತ್ ನಟ ರಣ್‌ವೀರ್ ಕೈಜೋಡಿಸುತ್ತಿದ್ದಾರೆ. ಇದನ್ನೂ ಓದಿ:ಪ್ರಣಿತಾ ಸುಭಾಷ್ ಮತ್ತೆ ಪ್ರೆಗ್ನೆಂಟ್- ಗುಡ್ ನ್ಯೂಸ್ ಹಂಚಿಕೊಂಡ ನಟಿ

ಎಂದೂ ನಟಿಸಿರದ ರಾ ಎಜೆಂಜ್ ಕುರಿತ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಳ್ತಿದ್ದಾರೆ. ಶೂಟಿಂಗ್‌ಗಾಗಿ ಈಗಾಗಲೇ ಚಿತ್ರತಂಡ ಥೈಲ್ಯಾಂಡ್‌ಗೆ ಕಾಲಿಟ್ಟಿದೆ. ಇಂದಿನಿಂದ (ಜು.25) ಚಿತ್ರೀಕರಣ ಶುರುವಾಗಿದೆ. ಇದನ್ನೂ ಓದಿ:ಮತ್ತೆ ಐಟಂ ಹಾಡಿಗೆ ಸೊಂಟ ಬಳುಕಿಸಿದ ‘ಕಾವಾಲಯ್ಯ’ ನಟಿ ತಮನ್ನಾ

ಮುಂದಿನ 6 ತಿಂಗಳು ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. 2025ರಲ್ಲಿ ರಣ್‌ವೀರ್ ಸಿಂಗ್ ನಟನೆಯ ಚಿತ್ರ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಆರ್. ಮಾಧವನ್, ಅರ್ಜುನ್ ರಾಮ್‌ಪಾಲ್ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಆದಿತ್ಯಾ ಧರ್ (Aditya Dhar) ನಿರ್ದೇಶನದ ಚಿತ್ರದಲ್ಲಿ ಭಿನ್ನವಾಗಿರುವ ಕಂಟೆಂಟ್ ಇರುತ್ತದೆ. ದೇಶ ಪ್ರೇಮದ ಕುರಿತು ಆ್ಯಕ್ಷನ್ ಸೀಕ್ವೆನ್ಸ್ ಹೆಚ್ಚಾಗಿರುವ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

ಈ ಪ್ರಾಜೆಕ್ಟ್ ಜೊತೆ ‘ಸಿಂಗಂ ಅಗೈನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಜೊತೆ ರಣ್‌ವೀರ್ ನಟಿಸಿದ್ದಾರೆ. ಅಂದಹಾಗೆ, ಕಳೆದ ಜುಲೈನಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ರಿಲೀಸ್ ಆಗಿತ್ತು. ಆಲಿಯಾ ಭಟ್ (Alia Bhatt) ಜೊತೆ ಕಡೆಯದಾಗಿ ಸಿನಿಮಾ ಮಾಡಿದ್ದರು.

Share This Article