ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

Public TV
1 Min Read

ಲಂಡನ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ರಣ್‍ವೀರ್ ತಾವು ಹೋದ ಕಡೆಯಲ್ಲಿ ಅಭಿಮಾನಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ವೃದ್ಧೆ ಅಭಿಮಾನಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ರೋಸ್ ಜೊತೆಗೆ ಕಿಸ್ ಕೊಟ್ಟಿದ್ದಾರೆ.

ನಟ ರಣ್‍ವೀರ್ ಸಿಂಗ್ ವೃದ್ಧೆ ಅಭಿಮಾನಿಗೆ ಗೌರವ ಕೊಟ್ಟು ಮಾತನಾಡಿಸಿದ ವಿಡಿಯೋವನ್ನು ಅಭಿಮಾನಿಗಳು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ. ನಟ ರಣ್‍ವೀರ್ ಸಿಂಗ್ ಸದ್ಯಕ್ಕೆ `83′ ಸಿನಿಮಾವನ್ನು ಮಾಡುತ್ತಿದ್ದು, ಈ ಸಿನಿಮಾ ಶೂಟಿಂಗ್ ಲಂಡನ್‍ನಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಣ್‍ವೀರ್ ಲಂಡನ್ ಪ್ರವಾಸದಲ್ಲಿದ್ದಾರೆ.

ಸಿನಿಮಾದ ಕೆಲವು ಪ್ರಮುಖ ದೃಶ್ಯವನ್ನು ಲಂಡನ್‍ನ ಸೌತ್‍ಹಾಲ್‍ನಲ್ಲಿ ಶೂಟ್ ಮಾಡಲಾಗಿದೆ. ಇದೇ ವೇಳೆ ರಣ್‍ವೀರ್ ಅಲ್ಲಿಗೆ ಬರುತ್ತಿರುವ ಮಾಹಿತಿ ತಿಳಿದುಕೊಂಡು ಅಪಾರ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ರಣ್‍ವೀರ್ ಬರುತ್ತಿದ್ದಂತೆ ಅಭಿಮಾನಿಗಳು ಬ್ಯಾಂಡ್‍ಗಳನ್ನು ಸ್ಥಳಕ್ಕೆ ತರಿಸಿ ಸ್ಥಳದಲ್ಲಿ ಹಬ್ಬದ ವಾತಾವರಣವನ್ನೇ ಕ್ರಿಯೇಟ್ ಮಾಡಿದ್ದರು.

ಅಭಿಮಾನಿಗಳ ಅಪಾರ ಅಭಿಮಾನಕ್ಕೆ ಸೋತು ರಣ್‍ವೀರ್ ಕೂಡ ಬ್ಯಾಂಡ್ ಮ್ಯೂಸಿಕ್‍ಗೆ ಸ್ಟೆಪ್ ಹಾಕಿದ್ದಾರೆ. ನಂತರ ಅಲ್ಲಿದ್ದ ಮಕ್ಕಳು, ಯುವಕ-ಯುವತಿಯರು ಮತ್ತು ಹಿರಿಯರು ಸೇರಿದಂತೆ ಎಲ್ಲರಿಗೂ ಕೈ ಬೀಸಿ ಹಾಯ್ ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ರೋಸ್ ಕೊಟ್ಟಿದ್ದಾರೆ. ಆ ರೋಸ್ ತೆಗೆದುಕೊಂಡು ಎಲ್ಲರ ಕೈ ಕುಲುಕುತ್ತಿದ್ದರು.

ಆಗ ರಣ್‍ವೀರ್ ಸುಮಾರು 70 ವರ್ಷದ ಅಜ್ಜಿಯೊಬ್ಬರನ್ನು ನೋಡಿದ್ದಾರೆ. ಅವರು ವ್ಹೀಲ್ ಚೇರ್ ಮೇಲೆ ಸ್ಟಿಕ್ ಹಿಡಿದು ಕುಳಿತುಕೊಂಡಿದ್ದರು. ಅವರ ಮುಂದೆ ರಣ್‍ವೀರ್ ಮಂಡಿಯೂರಿ ರೋಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದರು. ಆಗ ಅಜ್ಜಿ ಸಂತಸಗೊಂಡು ರಣ್‍ವೀರ್ ಕೆನ್ನೆಗೆ ಮುತ್ತು ಕೊಟ್ಟರು. ನಂತರ ರಣ್‍ವೀರ್ ಕೂಡ ಅಜ್ಜಿ ಕೈಗೆ ಕಿಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

https://twitter.com/RanveerSinghtbt/status/1157723474611384321

Share This Article
Leave a Comment

Leave a Reply

Your email address will not be published. Required fields are marked *