ಲಂಡನ್ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದ ದೀಪಿಕಾ ದಂಪತಿ

Public TV
1 Min Read

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗೆ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಬೆನ್ನಲ್ಲೇ ಪತಿ ಜೊತೆ ಲಂಡನ್‌ಗೆ ನಟಿ ಹಾರಿದ್ದರು. ಈಗ ವೆಕೇಷನ್ ಮುಗಿಸಿ ಮುಂಬೈಗೆ ಬಂದಿಳಿದಿದ್ದಾರೆ.

ಮದುವೆಯಾಗಿ 6 ವರ್ಷಗಳ ನಂತರ ಚೊಚ್ಚಲ ಮಗು ಆಗಮನವಾಗುತ್ತಿದೆ. ತಾಯ್ತನದಲ್ಲಿ ಖುಷಿಯಲ್ಲಿರುವ ದೀಪಿಕಾ ಇತ್ತೀಚೆಗೆ ಲಂಡನ್‌ಗೆ ಪತಿ ರಣ್‌ವೀರ್ ಸಿಂಗ್ ಜೊತೆ ತೆರಳಿದ್ದರು. ಈಗ ಮೋಜು ಮಸ್ತಿ ಮುಗಿಸಿ ಮುಂಬೈಗೆ ಈ ಜೋಡಿ ಮರಳಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಈ ವೇಳೆ, ಗರ್ಭಿಣಿ ದೀಪಿಕಾರನ್ನು ಪತಿ ರಣವೀರ್ ಜೋಪಾನ ಮಾಡುತ್ತಿರುವ ರೀತಿ ನೋಡಿ ಖುಷಿಪಟ್ಟಿದ್ದಾರೆ. ಬೆಸ್ಟ್ ಪತಿ ಎಂದು ಫ್ಯಾನ್ಸ್ ಹಾಡಿಹೊಗಳಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ಜೊತೆ ಶ್ರೀಲೀಲಾ ಡ್ಯುಯೆಟ್‌

ಅಂದಹಾಗೆ, ಪ್ರಭಾಸ್ ಜೊತೆಗಿನ ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಹುಭಾಷೆಗಳಲ್ಲಿ ಜೂನ್ 27ರಂದು ರಿಲೀಸ್ ಆಗಲಿದೆ.

Share This Article