ಒಂದೇ ಚಿತ್ರದಲ್ಲಿ 5 ಬಾಲಿವುಡ್ ಸ್ಟಾರ್ಸ್‌ಗೆ ‘ಆರ್ಟಿಕಲ್ 370’ ನಿರ್ದೇಶಕ ಆ್ಯಕ್ಷನ್ ಕಟ್

Public TV
2 Min Read

ಬಾಲಿವುಡ್‌ನಲ್ಲಿ ಇದೀಗ ವಿಭಿನ್ನ ಪ್ರಯತ್ನವೊಂದು ನಡೆಯುತ್ತಿದೆ. ಒಂದೇ ಚಿತ್ರದಲ್ಲಿ 5 ಬಾಲಿವುಡ್ ಸ್ಟಾರ್ ನಟರಿಗೆ ‘ಆರ್ಟಿಕಲ್ 370’ (Article 370) ನಿರ್ದೇಶಕ ಆದಿತ್ಯಾ ಧರ್ (Aditya Dhar) ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಕುರಿತು ಅಧಿಕೃತ ಪೋಸ್ಟರ್ ಕೂಡ ಹೊರಬಿದ್ದಿದೆ.

ಈ ಮೆಗಾ ಸಹಯೋಗದಲ್ಲಿ, ರಣವೀರ್ ಸಿಂಗ್ (Ranveer Singh), ಸಂಜಯ್ ದತ್ (Sanjay Dutt), ಆರ್. ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ (Arjun Rampal) ಇರುವುದು ವಿಶೇಷ. ಈ 5 ಸ್ಟಾರ್‌ಗಳನ್ನು ಒಂದೇ ಸಿನಿಮಾದಲ್ಲಿ ತೋರಿಸಿ ಅವರಿಗೆ  ಆದಿತ್ಯ ಧರ್ ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ:ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚಿದ ಮೇಘಾ ಶೆಟ್ಟಿ

ರಣವೀರ್ ಸಿಂಗ್, ತಮ್ಮ ಮುಂಬರುವ ಚಲನಚಿತ್ರವನ್ನು ಘೋಷಿಸಿ, ಇದು ನನ್ನ ಅಭಿಮಾನಿಗಳಿಗಾಗಿ, ನನ್ನೊಂದಿಗೆ ತುಂಬಾ ತಾಳ್ಮೆಯಿಂದಿರುವ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ನಿಮಗೆ ಭರವಸೆ ನೀಡುತ್ತೇನೆ. ಈ ಬಾರಿ ಹಿಂದೆಂದೂ ಇಲ್ಲದಂತಹ ಸಿನಿಮೀಯ ಅನುಭವವನ್ನು ನಾನು ನಿಮಗೆ ನೀಡುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಪತಿಯ ಪೋಸ್ಟ್‌ಗೆ ದೀಪಿಕಾ ಪಡುಕೋಣೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡಕ್ಕೆ ನಟಿ ಶುಭಕೋರಿದ್ದಾರೆ.

ಅಂದಹಾಗೆ, ರಣ್‌ವೀರ್ ಸಿಂಗ್ ಕಡೆಯದಾಗಿ ಆಲಿಯಾ ಭಟ್ (Aliaa Bhatt) ಜೊತೆ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದರು. ಒಪ್ಪಿಕೊಂಡಿದ್ದ ಎರಡ್ಮೂರು ಪ್ರಾಜೆಕ್ಟ್‌ಗಳು ನಿಂತು ಹೋದವು. ಈಗ ಮಲ್ಟಿ ಸ್ಟಾರ್‌ಗಳ ಸಿನಿಮಾ ಘೋಷಿಸುವ ಮೂಲಕ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ನೀಡಿದ್ದಾರೆ.

Share This Article