‘ರಾಮಾಯಣ’ ಚಿತ್ರಕ್ಕಾಗಿ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್

Public TV
1 Min Read

‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ರಣ್‌ಬೀರ್ ಕಪೂರ್ ‘ರಾಮಾಯಣ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಮನಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಣ್‌ಬೀರ್ ಕಪೂರ್ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್‌ಬೀರ್ (Ranbir Kapoor) ನಯಾ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣ್‌ಬೀರ್ ಕಾಣಿಸಿಕೊಂಡ್ರೆ, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಇದೀಗ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಕಣ್ಣಿಗೆ ಸ್ಟೈಲ್‌ ಆಗಿ ಕನ್ನಡಕ ಹಾಕಿ ಕಪ್ಪು ಟೀ ಶರ್ಟ್ ಧರಿಸಿ ನಟ ಸ್ಟೈಲೀಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ‘ರಾಮಾಯಣ’ (Ramayana) ಸಿನಿಮಾವನ್ನು ನಿತೇಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಅನಿಮಲ್’ ಚಿತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ರು, ಈಗ ರಾಮನಾಗಿ ರಣ್‌ಬೀರ್ ಮತ್ತೊಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:‘ರಣಹದ್ದು’ ಚಿತ್ರ ಟೀಸರ್ ರಿಲೀಸ್: ಇದು ತಂದೆ-ಮಕ್ಕಳ ಸಿನಿಮಾ

ಲವ್ & ವಾರ್, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಚಿತ್ರಗಳು ರಣ್‌ಬೀರ್ ಕಪೂರ್ ಕೈಯಲ್ಲಿವೆ.

Share This Article