ಬಡಮಕ್ಕಳಿಗಾಗಿ ‘ಆದಿಪುರುಷ್’ ಸಿನಿಮಾದ 10 ಸಾವಿರ ಟಿಕೆಟ್ ಖರೀದಿಸಿದ ರಣ್‌ಬೀರ್ ಕಪೂರ್

By
1 Min Read

‘ಬಾಹುಬಲಿ’ ಪ್ರಭಾಸ್- ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾ ಇದೇ ಜೂನ್ 16ಕ್ಕೆ ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿದೆ. ಈ ನಡುವೆ ಬಡಮಕ್ಕಳಿಗಾಗಿ ಬಾಲಿವುಡ್ ನಟ ರಣ್‌ಬೀರ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.  ಬಡಮಕ್ಕಳಿಗಾಗಿ 10 ಸಾವಿರ ಟಿಕೆಟ್‌ಗಳನ್ನ ಖರೀದಿಸಿದ್ದಾರೆ. ಬಡಮಕ್ಕಳಿಗೆ ಉಚಿತವಾಗಿ ಸಿನಿಮಾ ನೋಡಲು ರಣ್‌ಬೀರ್‌ ಕಪೂರ್ (Ranbir Kapoor) ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್

ಈ ಬಗ್ಗೆ ಆದಿಪುರುಷ್ ಟೀಂ ಆಗಲಿ, ರಣ್‌ಬೀರ್ ಕುಟುಂಬದವರು ಯಾವುದೇ ಅಪ್‌ಡೇಟ್ ಹಂಚಿಕೊಂಡಿಲ್ಲ. ಆದರೆ ಸಿನಿಮಾ ವಿಮರ್ಶಕ ತರುಣ್ ಆದರ್ಶ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಡಮಕ್ಕಳಿಗಾಗಿ ರಣ್‌ಬೀರ್ ಕಪೂರ್, ಆದಿಪುರುಷ್ ಚಿತ್ರ 10 ಸಾವಿರ ಟಿಕೆಟ್ ಖರೀದಿಸಿದ್ದಾರೆ. ಬುಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದೀಗ ರಣ್‌ಬೀರ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಭಾಸ್ (Prabhas) ರಾಮನಾಗಿ ನಟಿಸಿದ್ರೆ, ಕೃತಿ ಸನೋನ್ (Kritisanon) ಸೀತೆಯಾಗಿ ಜೀವತುಂಬಿದ್ದಾರೆ. ಸೈಫ್ ಅಲಿ ಖಾನ್ (Saif Ali Khan) ರಾವಣನಾಗಿ ಅಬ್ಬರಿಸಿದ್ದಾರೆ. ಚಿತ್ರದ ಟೀಸರ್, ಹಾಡುಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಭಾಸ್- ಕೃತಿ ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿರುವ ಪ್ರಭಾಸ್‌ಗೆ ಆದಿಪುರುಷ್ ಚಿತ್ರ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.

Share This Article