ರಣಬೀರ್- ರಶ್ಮಿಕಾ ನಟನೆಯ ‘ಅನಿಮಲ್’ ಸಿನಿಮಾದ ನ್ಯೂ ರಿಲೀಸ್ ಡೇಟ್ ಅನೌನ್ಸ್

Public TV
2 Min Read

‘ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಮಂದಣ್ಣ- ರಣ್‌ಬೀರ್ ಕಪೂರ್ (Ranbir Kapoor) ನಟನೆಯ ಬಹುನಿರೀಕ್ಷಿತ ‘ಅನಿಮಲ್’ (Animal) ಚಿತ್ರದ ರಿಲೀಸ್ ಡೇಟ್ ಬದಲಾವಣೆ ಬಗ್ಗೆ ಚಿತ್ರತಂಡ ಹೇಳಿತ್ತು. ಈಗ ಹೊಸ ದಿನಾಂಕದಲ್ಲಿ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ. ನ್ಯೂ ರಿಲೀಸ್ ಡೇಟ್‌ನ ‘ಅನಿಮಲ್’ ಟೀಮ್ ರಿವೀಲ್ ಮಾಡಿದೆ. ಈ ಮೂಲಕ ಪತ್ನಿ ಆಲಿಯಾ ಭಟ್ ಜೊತೆಗಿನ ಸಿನಿಮಾ ಕ್ಲ್ಯಾಶ್ ಕೈತಪ್ಪಿದೆ.

ರಶ್ಮಿಕಾ ಮಂದಣ್ಣ ಅವರು ಗುಡ್ ಬೈ, ಮಿಷನ್ ಮಜ್ನು, ಬಳಿಕ ‘ಅನಿಮಲ್’ ಸಿನಿಮಾ ಮೂಲಕ ಬರುತ್ತಿದ್ದಾರೆ. ರಶ್ಮಿಕಾ ನಟನೆಯ ಬಾಲಿವುಡ್‌ನ 3ನೇ ಸಿನಿಮಾ ಇದಾಗಿದ್ದು, ರಣ್‌ಬೀರ್ ಕಪೂರ್ ಜೊತೆಗಿನ ಸಿನಿಮಾದಿಂದ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾಯಬೇಕಿದೆ. ರಣ್‌ಬೀರ್- ರಶ್ಮಿಕಾ ರೊಮ್ಯಾನ್ಸ್ ನೋಡಲು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿತ್ತು. ಶ್ರೀವಲ್ಲಿ ನಟನೆಯ 3ನೇ ಹಿಂದಿ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಈಗ ರಿಲೀಸ್ ಬಗ್ಗೆ ಹೊಸ ಅಪ್‌ಡೇಟ್ ನೀಡಿದೆ ತಂಡ.

ಆಗಸ್ಟ್ 11ಕ್ಕೆ ‘ಅನಿಮಲ್’ ಸಿನಿಮಾವನ್ನು ಬಿಡುಗಡೆ ಮಾಡಲು ಟೀಮ್ ನಿರ್ಧರಿಸಿತ್ತು. ಇದರ ಹಿಂದೆ ನಿರ್ದೇಶಕರ ಈ ನಿರ್ಧಾರದ ಹಿಂದೆ ಒಂದು ಒಳ್ಳೆಯ ಕಾರಣ ಇದೆ. ಪ್ರೇಕ್ಷಕರಿಗೆ ಗುಣಮಟ್ಟದ ಸಿನಿಮಾವನ್ನು ನೀಡಬೇಕು ಎಂಬ ಕಾರಣಕ್ಕೆ ಸಂದೀಪ್ ರೆಡ್ಡಿ ವಂಗಾ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾ ಗ್ರಾಫಿಕ್ಸ್, ಕಂಟೆಂಟ್, ಲುಕ್ ಎಲ್ಲವೂ ಸರಿಯಾಗಿರಬೇಕು. ಈ ಎಲ್ಲಾ ತಯಾರಿಗೂ ಸಮಯ ಬೇಕು ಎಂದು ‘ಅನಿಮಲ್’ ಚಿತ್ರ ಬಿಡುಗಡೆಯನ್ನ ಮುಂದುಡಲಾಗಿದೆ. ಈ ವರ್ಷದ ಅಂತ್ಯ ಡಿಸೆಂಬರ್ 1ಕ್ಕೆ ಅನಿಮಲ್ ಸಿನಿಮಾ ತೆರೆಗೆ ಅಬ್ಬರಿಸಲಿದೆ.

‘ಅನಿಮಲ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ. ಚಿತ್ರದಲ್ಲಿ ಒಟ್ಟು 7 ಹಾಡುಗಳು ಇವೆ. ಪ್ರತಿ ಭಾಷೆಯ ಹಾಡುಗಳು ಪ್ರತ್ಯೇಕವಾಗಿ ಸಿದ್ಧವಾಗುತ್ತಿವೆ. ಎಲ್ಲವನ್ನೂ ಸೇರಿದರೆ 35 ಹಾಡುಗಳು ಆಗಲಿವೆ. ಆ ಎಲ್ಲ ಹಾಡುಗಳಲ್ಲಿ ಸಾಹಿತ್ಯದ ಗುಣಮಟ್ಟ ಚೆನ್ನಾಗಿರಬೇಕು ಎಂಬುದು ನಿರ್ದೇಶಕರ ಕಾಳಜಿ. ಇದು ಡಬ್ಬಿಂಗ್ ಸಿನಿಮಾ ಅಂತ ಅನಿಸಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಪರ್ಫೆಕ್ಟ್ ಆಗಿ ಮಾಡಲು ಅವರು ತೀರ್ಮಾನಿಸಿದ್ದಾರೆ. ಹಾಗಾಗಿ ರಣ್‌ಬೀರ್- ರಶ್ಮಿಕಾ (Rashmika Mandanna) ನಟನೆಯ ಈ ಸಿನಿಮಾ ತೆರೆಕಾಣೋದ್ದಕ್ಕೆ ಲೇಟ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಹೇಳಿಕೊಳ್ಳುವಂತಹ ಆಫರ್ಸ್ ಏನು ಇಲ್ಲ. ಪುಷ್ಪ 2, ಅನಿಮಲ್, ರೈನ್‌ಬೋ ಸಿನಿಮಾ ಬಿಟ್ಟರೇ ಬೇರೆ ಸಿನಿಮಾಗಳಿಲ್ಲ. ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾಗೆ ಕೊಂಚ ಎಫೆಕ್ಟ್ ಆಗಿದೆ. ಶ್ರೀಲೀಲಾ ೮ಕ್ಕೂ ಹೆಚ್ಚು ಸಿನಿಮಾಗಳಿವೆ. ರಶ್ಮಿಕಾ ಬಳಿಯಿರುವ ಸಿನಿಮಾದ ಸಕ್ಸಸ್‌ನಿಂದಲೇ ನಟಿಯ ವೃತ್ತಿ ಜೀವನ ನಿರ್ಧಾರವಾಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್