ಮಕ್ಕಳ ಕಲ್ಯಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ರಣ್‌ಬೀರ್ ಕಪೂರ್

Public TV
1 Min Read

‘ಅನಿಮಲ್’ ಸಿನಿಮಾ (Animal Film) 500 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ರಣ್‌ಬೀರ್ ಕಪೂರ್‌ಗೆ (Ranbir Kapoor) ಸಿನಿಮಾ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ. ಇದೇ ಖುಷಿಯಲ್ಲಿ ಕ್ರಿಸ್ಮಸ್ ಹಬ್ಬದಂದು ಮಗಳು ರಾಹಾ ಮುಖ ಕೂಡ ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗಳ ಹೆಸರಿನಲ್ಲಿ ಮಕ್ಕಳ ಕಲ್ಯಾಣಕ್ಕೆ 1 ಲಕ್ಷ ರೂ. ರಣ್‌ಬೀರ್ ಕಪೂರ್ ದೇಣಿಗೆ ನೀಡಿದ್ದಾರೆ.

ಮಗಳು ಹುಟ್ಟಿದ ದಿನದಿಂದ ಮಗಳ ಲುಕ್‌ನ್ನ ಎಲ್ಲಿಯೂ ರಣ್‌ಬೀರ್ ದಂಪತಿ ರಿವೀಲ್ ಮಾಡಿರಲಿಲ್ಲ. ಆದರೆ ನಿನ್ನೆ (ಡಿ.25) ರಿವೀಲ್ ಮಾಡಿದ್ದರು. ಕ್ರಿಸ್ಮಸ್ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಆಲಿಯಾ-ರಣ್‌ಬೀರ್, ರಾಹಾ ಮುಖ ಪಾಪರಾಜಿಗಳ ಕ್ಯಾಮೆರಾಗೆ ತೋರಿಸಿದ್ದರು. ಮುದ್ದು ಮುದ್ದಾಗಿರೋ ರಾಹಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ಜೊತೆಗೆ ಮಕ್ಕಳ ಕಲ್ಯಾಣಕ್ಕೆ ರಣ್‌ಬೀರ್ ಕಪೂರ್ ದೇಣಿಗೆ ನೀಡಿರುವ ಬಗ್ಗೆ ಆಲಿಯಾ ತಾಯಿ ಸೋನಿ ಅವರು ರಿವೀಲ್ ಮಾಡಿದ್ದಾರೆ.

ಮಗಳು ರಾಹಾ ಮುಖ ರಿವೀಲ್ ಮಾಡಿರುವ ಬೆನ್ನಲ್ಲೇ ದೇಣಿಗೆ ವಿಚಾರ ಕೂಡ ಸಖತ್ ಸುದ್ದಿಯಾಗುತ್ತಿದೆ. ರಣ್‌ಬೀರ್- ಆಲಿಯಾ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.‌ ಇದನ್ನೂ ಓದಿ:ಅನಿರುದ್ಧ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಹುಡುಗಿಗೆ ಅವಕಾಶ

ಬಾಲಿವುಡ್‌ನಲ್ಲಿ ರಣ್‌ಬೀರ್- ಆಲಿಯಾ ಭಟ್ (Alia Bhatt) ಇಬ್ಬರಿಗೂ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅನಿಮಲ್ ಸಕ್ಸಸ್ ನಂತರ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಇನ್ನೂ ಮದುವೆಯಾಗಿ ಮಗುವಾಗಿದ್ರೂ ಕೂಡ ಆಲಿಯಾ ಭಟ್ ಚಾರ್ಮ್ ಕಮ್ಮಿಯಾಗಿಲ್ಲ. ಸಿನಿಮಾರಂಗದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿ ಜನಮನ್ನಣೆ ಗಳಿಸಿದ್ದಾರೆ.

Share This Article