ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

Public TV
1 Min Read

ಹಿರಿಯ ನಟ ರಮೇಶ್ ಅರವಿಂದ್ (Ramesh Aravind) ಅಭಿನಯದ 106ನೇ ಸಿನಿಮಾ ದೈಜಿ (Daiji) ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಇವೆಂಟ್ ಬಳಿಕ ನಟ ರಮೇಶ್ ಅರವಿಂದ್ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಹಾಗೂ ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ವಿಷ್ಣು ಸರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಅವರಿಗೆ ಡಾಕ್ಟರೇಟ್ ಬಂದಾಗ ನಾನು ಹೇಳಿದ್ದು ಒಂದೇ. ಅವರಿಗೆ ಡಾಕ್ಟರೇಟ್ ಕೊಡೋಕೆ ಒಂದು ಕಾರಣವಲ್ಲ, ನೂರು ಕಾರಣಗಳಿವೆ ಎಂದಿದ್ದೆ. ನೂರು ಸಿನಿಮಾ ಮಾಡಿದ ಅವರಿಗೆ ನೂರು ಕಾರಣ ಇವೆ. ಅವರ ಕೆಲಸಗಳು, ಅವರು ಮಾಡಿದ ಯೋಚನೆಗಳು ನಮಗೆ ಮುಖ್ಯ. ಅವರ ಸ್ಮಾರಕ ಅನ್ನೋದು ಅಭಿಮಾನಿಗಳಿಗೆ ಸಾಮೂಹಿಕ ನೆನಪು. ಅಲ್ಲಿ ಆಗಲ್ಲ ಅಂದಾಗ ಸರ್ಕಾರ ಮೈಸೂರಿನಲ್ಲಿ ಪರ್ಫೆಕ್ಟ್ ಆಗಿ ಮಾಡಿಕೊಟ್ಟಿದೆ. ಮತ್ತೆ ಸ್ಮಾರಕ ಸಿಗುತ್ತೆ ಅಂತಾ ಕೇಳಿಪಟ್ಟೆ. ಏನಾದರೂ ಆಗಲಿ ಗಂಭೀರವಾಗಿ ಆಗಲಿ. ವಿಷ್ಣು ಸರ್ ಅಂದ್ರೆ ಗಾಂಭೀರ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡಿರುವ ನಟ ರಮೇಶ್ ಅರವಿಂದ್, ಸಾಹಸ ಸಿಂಹ ಅವರ ಬಗ್ಗೆ ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ದಿನವೇ ತಮ್ಮ ನಟನೆಯ `ದೈಜಿ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

Share This Article