‘ಮಂತ್ರಾಲಯ ಪರಿಮಳ’ ಪ್ರಶಸ್ತಿಗೆ ಪಾತ್ರರಾದ ನಟ ರಮೇಶ್ ಅರವಿಂದ್

Public TV
1 Min Read

ನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ (Ramesh Aravind) ಅವರಿಗೆ ಮಂತ್ರಾಲಯ (Mantralaya) ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ಸುಸಂದರ್ಭದಲ್ಲಿ ಶ್ರೀ ಸುಬುಧೇಂದ್ರತೀರ್ಥರ ಸಾನಿಧ್ಯದಲ್ಲಿ  ನೀಡುವ ಮಂತ್ರಾಲಯ ಪರಿಮಳ ಪ್ರಶಸ್ತಿ (Award) ಸಂದಿದೆ.

ಸಸ್ಫೆಸ್ ಮೀಡಿಯಾದ ಸಹಯೋಗದೊಂದಿಗೆ ಮರಳಿ ಸಂಸ್ಕೃತಿಗೆ ಕಾರ್ಯಕ್ರಮದಲ್ಲಿ  ನಟ ರಮೇಶ್ ಅರವಿಂದ್ ಅವರಿಗೆ ಮಂತ್ರಾಲಯ ಪರಿಮಳ ಪ್ರಶಸ್ತಿ ನೀಡಲಾಯಿತು. ಈ ಹಿಂದೆ ಮಂತ್ರಾಲಯ ಪರಿಮಳ ಪ್ರಶಸ್ತಿ ಅನ್ನು ಡಾ.ರಾಜಕುಮಾರ್, ರಜನಿಕಾಂತ್, ಸುಧಾಮೂರ್ತಿ, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್ ಅವರಿಗೆ ನೀಡಲಾಗಿತ್ತು. ಈ ಬಾರಿ ರಮೇಶ್ ಅರವಿಂದ್ ಅವರಿಗೆ ನೀಡಲಾಗಿದೆ.

 

ಕನ್ನಡದಲ್ಲಿ ನೂರಾರು ಸಿನಿಮಾಗಳನ್ನು ಮಾಡಿರುವ ರಮೇಶ್ ಅರವಿಂದ್ ಅವರಿಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಇದೇ ಮೊದಲ ಬಾರಿಗೆ ಮಂತ್ರಾಲಯದ ಪರಿಮಳ ಪ್ರಶಸ್ತಿ ಅವರಿಗೆ ಒಲಿದು ಬಂದಿದೆ.

Share This Article